ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ವರ್ಷದ ಮೊದಲ ಚಂಡಮಾರುತ ‘ಅಸನಿ’ಯಿಂದಾಗಿ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಮಾರ್ಚ್ 24ರ ವರೆಗೆ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಸಂಜೆ ಅಂಡಮಾನ್ ನಿಕೋಬಾರ್ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಅದರ ಪರಿಣಾಮ ರಾಜ್ಯದಾದ್ಯಂತ ಬೀರಿದೆ. ಹವಾಮಾನ ಇಲಾಖೆ ಹೇಳಿರುವಂತೆ ರಾಜ್ಯದಲ್ಲಿ ಎಲ್ಲೂ ತೊಂದರೆ ಇಲ್ಲ. ಆದರೆ, ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಮಲೆನಾಡಿಗರಿಗೆ ತಣ್ಣನೆಯ ಅನುಭವ
ಬೇಸಿಗೆಯ ಹೊಸ್ತಿಲಿನಲ್ಲೇ ಭಾರಿ ಬಿಸಿಲಿನ ಅನುಭವವಾಗುತ್ತಿದೆ. ಸೋಮವಾರ 33 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಸುಡು ಬಿಸಿಲಿನಿಂದ ಜನರು ಬಸವಳಿದ್ದಾರೆ. ಇಂದು ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ತಣ್ಣನೆಯ ಅನುಭವ ನೀಡುತ್ತಿದೆ. ಶಿವಮೊಗ್ಗ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಸ್ಮಾರ್ಟ್ ಕಾಮಗಾರಿ ನಡೆಯುತ್ತಿರುವ ಜಾಗಗಳಲ್ಲಂತೂ ಸಾರ್ವಜನಿಕರು ಓಡಾಡುವೇ ಕಷ್ಟವಾಗಿದೆ. ನಗರದಲ್ಲಿ ಮುಕ್ಕಾಲು ಗಂಟೆ ಮಳೆಯಾಗಿದೆ. ಜಿಲ್ಲೆಯ ಹಲವೆಡೆ ಮಳೆಯಾಗಿದೆ.