ಹರ್ಷ ಹಿಂದೂ ಹತ್ಯೆ ಪ್ರಕರಣ, ತನಿಖೆ ಆರಂಭಿಸಿದ NIA, ಎಲ್ಲೆಲ್ಲಿ ಭೇಟಿ

 

 

ಸುದ್ದಿ ಕಣಜ.ಕಾಂ | DISTRICT | HARSHA MURDER CASE
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷ ಹಿಂದೂ ಹತ್ಯೆ ಪ್ರಕರಣದ‌ ತನಿಖೆ‌ ಆರಂಭಿಸಿರುವ ರಾಷ್ಟ್ರೀಯ ತನಿಖೆ ಸಂಸ್ಥೆ(NIA) ಶಿವಮೊಗ್ಗದ ಹಲವೆಡೆ ಭೇಟಿ‌‌ ನೀಡಿ ಪರಿಶೀಲನೆ ಮಾಡಿದೆ.
ಎನ್.ಐ.ಎ ಇನ್ ಸ್ಪೆಕ್ಟರ್ ಷಣ್ಮುಗಂ ನೇತೃತ್ವದ ತಂಡವು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು.

READ | ಗಿಗಾ ಟ್ರಾವೆಲೆಕೇಷನ್ಸ್ ನಲ್ಲಿ‌ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

ಕೊಲೆಯಾದ ಜಾಗಕ್ಕೆ ತಂಡ‌ ಭೇಟಿ
ಹರ್ಷ ಕೊಲೆಯಾದ ಜಾಗಕ್ಕೆ ಭೇಟಿ ನೀಡಿರುವ ತಂಡವು ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳೀಯರಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದಿದ್ದಾರೆ. ಹರ್ಷನ ಕುಟುಂಬದ ಸದಸ್ಯರಿಗೆ ತನಿಖಾ ತಂಡ ಭೇಟಿ ನೀಡಿಲ್ಲ.
ಲಾಡ್ಜ್ ಗಳಲ್ಲೂ ಪರಿಶೀಲನೆ
ಈಗಾಗಲೇ ಬೆಂಗಳೂರಿನ ಪರಪ್ಪನ ಆಗ್ರಹಾರಕ್ಕೆ‌ ಭೇಟಿ‌ ನೀಡಿ 10 ಆರೋಪಿಗಳನ್ನು ವಿಚಾರಣೆ ಮಾಡಲಾಗಿದೆ. ಲಾಡ್ಜ್ ಗಳಲ್ಲೂ ಪರಿಶೀಲನೆ ಮಾಡಲಾಗಿದ್ದು, ಆರೋಪಿಗಳು ಲಾಡ್ಜ್ ಗಳಲ್ಲಿ ತಂಗಿದ್ದರೆಂಬ ಮಾಹಿತಿ ಆಧಾರದ ಮೇಲೆ ಪರಿಶೀಲನೆ ಮಾಡಲಾಗಿದ್ದು, ಕೆಲವು ಮೊಬೈಲ್ ಸಂಖ್ಯೆಗಳನ್ನು ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

error: Content is protected !!