ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ‘ಸುಶಾಸನ ಮಾಸ’ದ ಅಂಗವಾಗಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ವಲಯ ಮಟ್ಟದ ಪೋಸ್ಟರ್ ಸ್ಪರ್ಧೆ(poster Competition)ಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಶುಕ್ರವಾರ ಶಿವಮೊಗ್ಗದ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ(National Education Policy)-2020 ಅನ್ವಯ ಉನ್ನತ ಶಿಕ್ಷಣದ ಪುನರ್ ವಿನ್ಯಾಸ ಕುರಿತು ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಪೋಸ್ಟರ್ ಸ್ಪರ್ಧೆಯಲ್ಲಿ ಹಲವರು ಉತ್ತಮ ಸಾಧನೆ ಮಾಡಿದ್ದಾರೆ.
READ | ಶಿವಮೊಗ್ಗದಲ್ಲಿ ಕಳ್ಳತನ, ರಾಜಸ್ಥಾನ, ನೇಪಾಳ ಲಿಂಕ್!, ಇದು ಖಾಕಿ ಪಡೆಯ ರೋಚಕ ಕಾರ್ಯಾಚರಣೆ
ಪೋಸ್ಟರ್ ಸ್ಪರ್ಧೆಯಲ್ಲಿ ಯಾವ ಜಿಲ್ಲೆಗಳ ಮೇಲುಗೈ?
ರಾಮನಗರ(Ramanagar)ದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ 7ನೇ ಸೆಮಿಸ್ಟರ್(ಸಿಎಸ್) ವಿದ್ಯಾರ್ಥಿನಿ ಕೆ.ಕೆ.ನೇಹಾ ಪ್ರಥಮ ಬಹುಮಾನ, ಗಂಗಾವತಿ(Gangavathi)ಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್(ಸಿಇ) ವಿದ್ಯಾರ್ಥಿ ಸುಶೀಲ್ ಕೆ. ಗುನಗಾ ದ್ವಿತೀಯ ಬಹುಮಾನ, ರಾಯಚೂರು (Raichur) ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ 7ನೇ ಸೆಮಿಸ್ಟರ್(ಇಸಿ) ವಿದ್ಯಾರ್ಥಿನಿ ಪೂರ್ಣಿಮಾ ಜಿ ಇವರು ತೃತೀಯ ಬಹುಮಾನ ಪಡೆದುಕೊಂಡರು.
ವಿವಿಧ ಸ್ಪರ್ಧೆಗಳ ಫಲಿತಾಂಶ
ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಸುಶಾಸನದ ವಿವಿಧ ಆಯಾಮಗಳು ವಿಷಯ ಕುರಿತು ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಪೋಸ್ಟರ್ ಸ್ಪರ್ಧೆಯಲ್ಲಿ ಭದ್ರಾವತಿ(Bhadravathi)ಯ ಸರ್ಕಾರಿ ವಿಐಎಸ್ಎಸ್ಜೆ ಪಾಲಿಟೆಕ್ನಿಕ್ ಕಾಲೇಜಿನ 3ನೇ ಸೆಮಿಸ್ಟರ್(ಇಇ) ವಿದ್ಯಾರ್ಥಿ ಸಿ.ಲಖನ್ ಪ್ರಥಮ ಬಹುಮಾನ, ಕಾರ್ಕಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 5ನೇ ಸೆಮಿಸ್ಟರ್(ಸಿಇ) ವಿದ್ಯಾರ್ಥಿ ಓಂಕಾರ್ ಸಿ ಆಚಾರ್ ದ್ವಿತೀಯ ಬಹುಮಾನ, ಕಲಬುರಗಿಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ 1ನೇ ಸೆಮಿಸ್ಟರ್(ಸಿಎಸ್) ವಿದ್ಯಾರ್ಥಿನಿ ಕಲ್ಪನಾ ಚವಾಣ್ ತೃತೀಯ ಬಹುಮಾನ ಪಡೆದಿರುತ್ತಾರೆ ಎಂದು ಶಿವಮೊಗ್ಗ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
https://suddikanaja.com/2022/12/16/shivamogga-police-notice-to-install-cctv-camaras-within-15-days/