ಸ್ವಿಮ್ಮಿಂಗ್ ಪೂಲ್ ನಲ್ಲಿ ಡಿಪ್ಲೋಮಾ ವಿದ್ಯಾರ್ಥಿ ಶವ ಅನುಮಾನಾಸ್ಪದವಾಗಿ ಪತ್ತೆ

 

 

ಸುದ್ದಿ ಕಣಜ.ಕಾಂ‌ | CITY | CRIME NEWS
ಶಿವಮೊಗ್ಗ: ಡಿಪ್ಲೋಮಾ ವಿದ್ಯಾರ್ಥಿಯೊಬ್ಬರ ಶವ ನಗರದ ಹುಲಿ‌ ಮತ್ತು ಸಿಂಹಧಾಮ‌ ಹಿಂಭಾಗದಲ್ಲಿರುವ ಈಜುಕೊಳದಲ್ಲಿ‌ ಇತ್ತೀಚೆಗೆ ಪತ್ತೆಯಾಗಿದ್ದು, ಪಾಲಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

READ | ಎಂ ಸ್ಯಾಂಡ್ ವ್ಯಾಪಾರಿ ಕೊಲೆ ಮಾಡಿದ ಆರೋಪಿ ಅರೆಸ್ಟ್

ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿ ಹೊಸನಗರದ ನಿವಾಸಿ ಅನಿಲ್ (22) ಮೃತ ವಿದ್ಯಾರ್ಥಿ. ಈತ ಗಾಡಿಕೊಪ್ಪದಲ್ಲಿ ಸ್ನೇಹಿತರೊಂದಿಗೆ ಮನೆ ಮಾಡಿಕೊಂಡಿದ್ದ. ಶನಿವಾರ ಈಜುವುದಕ್ಕಾಗಿ ಸ್ನೇಹಿತರೊಂದಿಗೆ ತೆರಳಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಅನಿಲ್ ಗೆ ಈಜು ಚೆನ್ನಾಗಿ ಬರುತಿತ್ತು. ಶರಾವತಿ ಹಿನ್ನೀರಿನಲ್ಲೂ ಈತ ಈಜಾಡುತಿದ್ದ ಎಂದು ತಿಳಿದುಬಂದಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!