KPSC ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ, ಹುದ್ದೆಗಳ ವಿವರ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್.ಸಿ) ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 410 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಆಯೋಗವು ಮಾರ್ಚ್ ನಲ್ಲಿಯೇ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯು ಮಾರ್ಚ್ 31ರಿಂದ ಆರಂಭಗೊಂಡಿದೆ. ಕೊನೆಯ ದಿನ ಏಪ್ರಿಲ್ 24ರ ರಾತ್ರಿ 11.45ರ ವರೆಗೆ ಇದೆ. ಶುಲ್ಕ ಪಾವತಿಗೆ ಏ.30 ಅಂತಿಮ ದಿನವಾಗಿರುತ್ತದೆ.

JOBS FB Link

READ | KIOCL Recruitment, ವಿವಿಧ ಹುದ್ದೆಗಳ ನೇಮಕಾತಿ, ಮಾಸಿಕ 1.20 ಲಕ್ಷ ರೂ.ವರೆಗೆ ಸಂಬಳ, ನೇರ ಸಂದರ್ಶನ ಮೂಲಕ ಆಯ್ಕೆ

ಹುದ್ದೆ ಹೆಸರು ಹುದ್ದೆ ಸಂಖ್ಯೆ
ಕಿರಿಯ ಎಂಜಿನಿಯರ್ (ಸಿವಿಲ್) 89
ಕಿರಿಯ ಆರೋಗ್ಯ ನಿರೀಕ್ಷಕರು 57
ಎಲೆಕ್ಟ್ರಿಷಿಯನ್ ಗ್ರೇಡ್ 1 2
ಎಲೆಕ್ಟ್ರಿಷಿಯನ್ ಗ್ರೇಡ್ 2 10
ನೀರು ಸರಬರಾಜು ಆಪರೇಟರ್  89
ಸಹಾಯಕ ಸರಬರಾಜು ಆಪರೇಟರ್  163
ಒಟ್ಟು ಹುದ್ದೆಗಳ ಸಂಖ್ಯೆ 410

ಅರ್ಜಿ ಸಲ್ಲಿಸುವವರು ಪ್ರೊಫೈಲ್ ಸೃಷ್ಟಿಸಿ- ಅಪ್ಲಿಕೇಷನ್ ಸಬ್ಮಿಷನ್- ಶುಲ್ಕ ಪಾವತಿ ಮಾಡಬೇಕು. ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಲ್ಲ ಮಾಹಿತಿಗಳು ಅಧಿಸೂಚನೆಯಲ್ಲಿ ಲಭ್ಯ ಇವೆ.

NOTIFICATION

WEBSITE

error: Content is protected !!