ಗ್ರಾಹಕರಿಗೆ ಗುಡ್ ನ್ಯೂಸ್, 2ನೇ ದಿನವೂ ಪೆಟ್ರೋಲ್, ಡಿಸೇಲ್ ಬೆಲೆ ಸ್ಥಿರ, ಇಂದು ಎಷ್ಟಿದೆ ರೇಟ್?

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳುತಿದ್ದಂತೆಯೇ ಇಂಧನ ಬೆಲೆಯಲ್ಲೂ ನಿರಂತರ ಏರಿಕೆ ಆರಂಭವಾಗಿತ್ತು. ಒಂದೇ ವಾರದಲ್ಲಿ ಪ್ರತಿ ಲೀಟರ್ ಪೆಟ್ರೋಲಿಗೆ 8 ರೂಪಾಯಿ ಏರಿಕೆಯಾಗಿತ್ತು. ಡಿಸೇಲ್ ದರದಲ್ಲೂ ಲೀಟರಿಗೆ 6.39 ರೂಪಾಯಿ ಹೆಚ್ಚಳವಾಗಿತ್ತು.

ಇಂದಿನ ಪೆಟ್ರೋಲ್ ದರ 112.56 ಇಂದಿನ ಡಿಸೇಲ್ ದರ 96.04

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಭೀಕರ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲೇ ಬೆಲೆ ಮುಗ್ಗರಿಸಿತ್ತು. ಇದರಿಂದಾಗಿ, ಗ್ರಾಹಕರು ಕಂಗಾಲಾಗಿದ್ದರು. ಆದರೂ ಕಳೆದೆರಡು ದಿನಗಳಿಂದ ಬೆಲೆ ಏರಿಕೆ ಆಗದಿದ್ದರೂ ಇಳಿಕೆ ಸಹ ಆಗಿಲ್ಲ. ಹೀಗಾಗಿ, ಸಹಜವಾಗಿಯೇ ಜನರಲ್ಲಿ ಆತಂಕವಿದೆ.

ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಪ್ರಮಾಣ
ದಿನಾಂಕ ಪೆಟ್ರೋಲ್ ಡಿಸೇಲ್
ಏಪ್ರಿಲ್ 01 -1.01 -0.92
ಏಪ್ರಿಲ್ 02 1.72 1.57
ಏಪ್ರಿಲ್ 03 0.63 0.61
ಏಪ್ರಿಲ್ 04 0.18 0.21
ಏಪ್ರಿಲ್ 05 0.44 0.37
ಏಪ್ರಿಲ್ 06 1.49 1.38
ಏಪ್ರಿಲ್ 07 0 0
ಏಪ್ರಿಲ್ 08 0 0

error: Content is protected !!