ಆರಗ ವಿರುದ್ಧ ಆರೋಪಗಳ‌ ಸುರಿಮಳೆಗೆರೆದ ಕಿಮ್ಮನೆ, ಇವರ ಡಿಮ್ಯಾಂಡ್ ಏನು?

 

 

ಸುದ್ದಿ ಕಣಜ.ಕಾಂ‌ | DISTRICT | POLITICAL NEWS
ಶಿವಮೊಗ್ಗ: ನಗರದಲ್ಲಿ‌ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಆರೋಪಗಳ‌ ಸುರಿಮಳೆಗೆರೆದಿದ್ದಾರೆ.
ಆರೋಪ‌ ನಂಬರ್ 1
ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ.‌ ಆರಗ ಜ್ಞಾನೇಂದ್ರ ಅವರು ಕ್ಷೇತ್ರಕ್ಕೆ ಕಳಂಕ ತರುತ್ತಿದ್ದಾರೆ. ರಾಜ್ಯದ ಜನ ಬೈಯುತಿದ್ದಾರೆ. ಹೀಗಾಗಿ, ಕೂಡಲೇ ರಾಜೀನಾಮೆ ನೀಡಬೇಕು.
ಆರೋಪ‌ ನಂಬರ್‌ 2
ತೀರ್ಥಹಳ್ಳಿ ಕ್ಷೇತ್ರದ ಶಾಸಕರಿಗೆ ಸರ್ಕಾರದಲ್ಲಿ ಪ್ರಬಲ‌ ಹುದ್ಧೆ ಲಭಿಸಿದ್ದಕ್ಕೆ ಖುಷಿ ಪಟ್ಟಿದ್ದೆ. ಕರೆದು ಸನ್ಮಾನ ಕೂಡ ಮಾಡಲಾಗಿತ್ತು. ಆದರೆ, ಇವರಿಂದಾಗಿ ಕ್ಷೇತ್ರದ ಹೆಸರು ಹಾಳಾಗುತಿದ್ದಾರೆ ಎಂದು ತಿಳಿಸಿದರು.
ಆರೋಪ‌ ನಂಬರ್‌ 3
ರಾಜ್ಯದಲ್ಲಿ ಶಾಂತಿ,‌ ಸಮಾಧಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ, ಅಧಿಕಾರದಲ್ಲಿ ಇರುವವರೇ ಪ್ರಚೋದನಕಾರಿ ಹೇಳಿಕೆ ನೀಡುತಿದ್ದಾರೆ. ಇದು‌ ಖಂಡನೀಯ
ಆರೋಪ‌ ನಂಬರ್‌ 4
ಗೃಹ ಸಚಿವರಾಗಿ ಶಾಂತಿ ಕದುಡುವ ಕೆಲಸ‌‌ ಮಾಡಬಾರದು. ಇತ್ತೀಚೆಗೆ ನೀಡಿರುವ ಹೇಳಿಕೆ ಸಹ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಮುಗಿಬೀಳಲಿ ಎನ್ನುವ ಉದ್ದೇಶವಿದೆ.

READ | ಶಿವಮೊಗ್ಗಕ್ಕೆ ಖಡಕ್ ನೂತನ ಡಿವೈಎಸ್ಪಿ ನಿಯೋಜನೆ, ಅವರ ಬಗ್ಗೆ ಇಲ್ಲಿದೆ ಮಾಹಿತಿ

ದೇಶದ್ರೋಹ ಕೇಸ್ ದಾಖಲಿಸಿ
ಗೃಹ ಸಚಿವರ ವಿರುದ್ಧವೇ ದೇಶದ್ರೋಹ ಪ್ರಕರಣ ದಾಖಲಿಸಬೇಕು, ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಕಾರಣಕ್ಕೆ ಏಪ್ರಿಲ್ 8ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಿಮ್ಮನೆ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್, ಪಾಲಿಕೆ ಆಡಳಿತ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಕಾಂಗ್ರೆಸ್ ಮುಖಂಡರಾದ ಎಸ್‌ಪಿ ದಿನೇಶ್, ವಿಜಯ್‌ಕುಮಾರ್(ದನಿ), ರಂಗೇಗೌಡ, ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಉಪಸ್ಥಿತರಿದ್ದರು.

error: Content is protected !!