ಯುಗಾದಿ ಆಚರಣೆಗೆ ಮಲೆನಾಡು ಸಿದ್ಧ, ಹಣ್ಣು, ತರಕಾರಿ ದುಬಾರಿ

 

 

ಸುದ್ದಿ ಕಣಜ.ಕಾಂ | DISTRICT | FESTIVAL
ಶಿವಮೊಗ್ಗ: ‘ಯುಗಾದಿ’ ಆಚರಣೆಗೆ ಮಲೆನಾಡು ಸಿದ್ಧವಾಗಿದೆ. ಬೆಲೆ ಏರಿಕೆಯ ನಡುವೆಯೂ ಖರೀದಿ ಭರಾಟೆ ಮಾತ್ರ ಕಡಿಮೆಯಾಗಿಲ್ಲ. ಹೊಸ ಬಟ್ಟೆ, ಬೇವು, ಬಾಳೆಕಂದು, ಮಾವು, ಮಾವಿನ ಎಲೆ, ತರಕಾರಿ ಹೀಗೆ ತರಹೇವಾರಿ ಸಾಮಗ್ರಿಗಳನ್ನು ಜನರು ಖರೀದಿಸಿದ್ದಾರೆ.

READ | ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಯುವಕರಿಂದ ನೈತಿಕ ಪೊಲೀಸ್ ಗಿರಿ

ಎಲ್ಲವೂ ತುಟ್ಟಿ, ಹಬ್ಬಕ್ಕೆ ಜೇಬು ಸುಡುವಷ್ಟು ರೇಟ್
ಶುಕ್ರವಾರ ಮಾರುಕಟ್ಟೆಯಲ್ಲಿ ದ್ರಾಕ್ಷಿ ಕೆಜಿಗೆ 80-100 ರೂಪಾಯಿ, ಕಿತ್ತಾಳೆ 60-80 ರೂ., ಟೊಮ್ಯಾಟೋ 10 ರೂ., ಬೀನ್ಸ್ 40 ರೂ, ಕ್ಯಾರೆಟ್ 60 ರೂ, ಮೂಲಂಗಿ ಒಂದು ಕಟ್ಟು 10 ರೂ., ಬೆಂಡೆ ಕಾಯಿ 30 ರೂ. ಇದೆ.
ಪ್ರಮುಖ ವೃತ್ತದಲ್ಲಿ ಮಾರಾಟ
ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ಸವಳಂಗ ರಸ್ತೆ ವಿವಿಧೆಡೆಗಳಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡಲಾಯಿತು. ವ್ಯಾಪಾರ ವಹಿವಾಟು ಜೋರಾಗಿತ್ತು. ಬಸ್ ನಿಲ್ದಾಣದಲ್ಲಿ ಜನಜಂಗುಳಿ ಇತ್ತು.

error: Content is protected !!