ಹಿಂದೂ ಹರ್ಷ ಹತ್ಯೆ ಪ್ರಕರಣ, ಆರೋಪಿಗಳು ಎನ್‍ಐಎ ವಶಕ್ಕೆ

ಸುದ್ದಿ ಕಣಜ.ಕಾಂ | KARNATAKA | CRIME NEWS
ಬೆಂಗಳೂರು: ಭಜರಂಗ ದಳದ ಕಾರ್ಯಕರ್ತ ಹಿಂದೂ ಹರ್ಷನ ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಐದು ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ)ದ ವಶಕ್ಕೆ ಒಪ್ಪಿಸಲಾಗಿದೆ.
ಎನ್.ಐ.ಎ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ ಬಿ.ಜಿ.ಪ್ರಮೋದ್ ಅವರಿದ್ದ ಪೀಠವು ಹೆಚ್ಚಿನ ತನಿಖೆಗಾಗಿ ಆರೋಪಿಗಳಾದ ಅಬ್ದುಲ್ ಅಫ್ಘಾನ್ (21), ಅಬ್ದುಲ್ ಖಾದರ್ ಜಿಲಾನ್(25), ಫರಜ್ ಪಾಶಾ (24), ಸೈಯದ್ ನದೀಮ್ (20), ಜಾಫರ್ ಸಾದಿಕ್(50) ಎಂಬುವರನ್ನು ಮೇ 5ರ ಬೆಳಗ್ಗೆಯಿಂದ ಮೇ 9ರ ಮಧ್ಯಾಹ್ನದವರೆಗೆ ಎನ್.ಐ.ಎ ವಶಕ್ಕೆ ಒಪ್ಪಿಸಲಾಗಿದೆ.

READ | ಹರ್ಷ ಕೊಲೆಗೆ ಬಳಸಿದ್ದು ಎರಡು ಕಾರು, ಪೊಲೀಸ್ ಕಸ್ಟಡಿಗೆ 10 ಆರೋಪಿಗಳು

ಏನಿದು ಪ್ರಕರಣ?
2022ರ ಫೆಬ್ರವರಿ 20ರ ರಾತ್ರಿ 9 ಗಂಟೆಯ ಸುಮಾರಿಗೆ ಎನ್.ಟಿ. ರಸ್ತೆಯ ಭಾರತಿ ಕಾಲೊನಿ ಕ್ರಾಸ್ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಕೋಮುಗಲಭೆಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ 10 ಆರೋಪಿಗಳನ್ನು ಬಂಧಿಸಲಾಗಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.