‘ದಾರಿ ತಪ್ಪುವ ಹಂತದಲ್ಲಿದೆ‌ ಪಿ.ಎಸ್.ಐ ನೇಮಕಾತಿ ಹಗರಣದ ತನಿಖೆ, 2019, 20ರಲ್ಲೂ ನಡೆದಿದೆಯಂತೆ ಭ್ರಷ್ಟಾಚಾರ!’

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಪಿ.ಎಸ್.ಐ ನೇಮಕಾತಿಯಲ್ಲಿ‌ ನಡೆದಿರುವ ಹಗರಣದ ತನಿಖೆ ದಾರಿ ತಪ್ಪುವ ಹಂತದಲ್ಲಿದೆ ಎಂದು ಆರೋಪಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಪ್ರಕರಣದ‌ ತನಿಖೆ ಹೈಕೋರ್ಟ್ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ನಡೆಸಬೇಕೆಂದು ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ‌ ಬುಧವಾರ ಮಾತನಾಡಿದ‌‌ ಅವರು, ಸಿಓಡಿಯ ಬಗ್ಗೆ ನಮಗೆ ವಿಶ್ವಾಸವಿದೆ ನಿಜ. ಆದರೆ, ರಾಜಕಾರಣಿಗಳ ಕಪಿಮುಷ್ಠಿಗೆ ಸಿಕ್ಕು ತನಿಖೆ ದಾರಿ ತಪ್ಪಲಿದೆ. ಹೀಗಾಗಿ, ನ್ಯಾಯಾಂಗ ತನಿಖೆ ಆಗಬೇಕು ಎಂದರು.
ಪಿ.ಒ. ಶಿವಕುಮಾರ್ ಹೇಳಿದ್ದೇನು?

  • ಪ್ರಶ್ನೆಪತ್ರಿಕೆ, ಓಎಂಆರ್ ಶೀಟ್‌ಗಳ ಮೌಲ್ಯಮಾಪನ, ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಕೇಂದ್ರದಲ್ಲಿದ್ದ ಮೇಲ್ವಿಚಾರಕರು, ಪ್ರಶ್ನೆ ಪತ್ರಿಕೆಗಳ ಸಾಗಣೆ ಮಾಡಿದವರು, ಹೀಗೆ ಎಲ್ಲ ದೇಷ್ಟಿಕೋನಗಳಲ್ಲಿ ತನಿಖೆ ಆಗಬೇಕು.
  • ಪಿಎಸ್‌.ಐ ನೇಮಕಾತಿಯ ಭ್ರಷ್ಟಾಚಾರ ಪ್ರಸಕ್ತ ವರ್ಷದಲ್ಲಿ ಮಾತ್ರವಲ್ಲ. 2019 ಮತ್ತು 2020ರಲ್ಲಿಯೂ ನಡೆದಿದೆ. ಆದರೆ, ಅದು ಬೆಳಕಿಗೆ ಬಂದಿರಲಿಲ್ಲ. ಈ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಈ ನೇಮಕಾತಿಯ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಸಿದ್ಧ ರಾಜಕಾರಣಿಯ ಪಾತ್ರವೂ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಬಹಿರಂಗಪಡಿಸುವೆ ಎಂದು ಬಾಂಬ್ ಸಿಡಿಸಿದರು.
  • ನಾನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವೆ. ಸಂಘಟನೆಯ ಮೂಲಕ ಪಕ್ಷವನ್ನು ಬಲಪಡಿಸಿ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. ತಮಗೆ ಟಿಕೆಟ್ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು.

ನಿವೃತ್ತ ಡಿವೈಎಸ್‌ಪಿ ಮಂಜಪ್ಪ, ನಿವೃತ್ತ ವೃತ್ತ ನಿರೀಕ್ಷಕ ಗಣೇಶ್, ನಿವೃತ್ತ ಡಿಡಿಪಿಐ ಎನ್.ಎಸ್. ಕುಮಾರ್ ಇದ್ದರು.