ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ‌ ಆಯುರ್ವೇದ ಸಸ್ಯ ಸಂಕುಲ

ಸುದ್ದಿ ಕಣಜ.ಕಾಂ | DISTRICT | FREEDOM PARK
ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ ನಲ್ಲಿರುವ ತೆಂಗಿನ ಮರಗಳನ್ನು ರಕ್ಷಿಸುವ ಜತೆಗೆ ಇಲ್ಲಿ ಎಲ್ಲ ಬಗೆಯ ಆಯುರ್ವೇದ ಕಾಡುಜಾತಿಯ ಮಗಳನ್ನು ಬೆಳೆಸುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ‌ ಸೂಚನೆ ನೀಡಿದರು.
ಗುರುವಾರ ಫ್ರೀಡಂ ಪಾರ್ಕಿಗೆ ಭೇಟಿ ನೀಡಿದ ಅವರು ಪರಿಸ್ಥಿತಿಯನ್ನು ಅವಲೋಕಿಸಿದರು. ಮಕ್ಕಳಲ್ಲಿ ಆಯುರ್ವೇದ ಗಿಡಗಳ‌ ಬಗ್ಗೆ ತಿಳಿವಳಿಕೆ ಮೂಡಿಸಲು ಮತ್ತು ಅವುಗಳ‌ ಹೆಸರುಗಳನ್ನು ತಿಳಿದುಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಇದನ್ನು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನೋಡಿಕೊಳ್ಳಲಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

READ | ಶಿವಮೊಗ್ಗ ವಿವಿಧೆಡೆ ಇಂದು, ನಾಳೆ ಕರೆಂಟ್ ಇರಲ್ಲ

ಶೌಚಾಲಯಗಳನ್ನು ರಿಪೇರಿ ಮಾಡಿ
ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಶೌಚಾಲಯಗಳು ಸಂಪೂರ್ಣ ಹಾಳಾಗಿವೆ.‌ ಇದರ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ವಹಿಸಿಕೊಂಡು ಜನರಿಗೆ ಉಚಿತವಾಗಿ ಬಳಕೆ ಬಿಡಬೇಕು.‌ಅದಕ್ಕಾಗಿ‌ಅಗತ್ಯವಿರುವ ಟೆಂಡರ್ ಕರೆಯಬೇಕು.‌ ಕುಡಿಯುವ ನೀರಿನ ಯಂತ್ರಗಳನ್ನು ಸರಿಪಡಿಸುವಂತೆ ತಾಕೀತು ಮಾಡಿದರು.
ಫ್ರೀಡಂ ಪಾರ್ಕ್‌ ಮುಂಭಾಗದ ಕಾಂಪೌಂಡ್ ಸಂಪೂರ್ಣಗೊಳಿಸುವ ಜತೆಗೆ ಅಗತ್ಯವಿರುವೆಡೆ ಗೇಟ್ ಗಳನ್ನು ಅಳವಡಿಸಬೇಕು. ಇಲ್ಲಿರುವ ತೆಂಗಿನ ಮರ, ಹುಣಸೆ ಸೇರಿ ಉತ್ಪನ್ನ ಕೊಡುವ ಮರಗಳನ್ನು ಕೂಡಲೇ ಹರಾಜು ಕರೆದು ನೀಡುವಂತೆ ಸೂಚನೆ ನೀಡಿದರು.
ಸ್ಮಾರ್ಟ್‌ ಸಿಟಿ ಎಂಜಿನಿಯರ್ ಕೃಷ್ಣಪ್ಪ ಹಾಗೂ ಪಾಲಿಕೆಯ ಆಯುಕ್ತ ಮಾಯಣ್ಣಗೌಡ,‌ ಎಸ್.ದತ್ತಾತ್ರಿ ಸೇರಿದಂತೆ ಇತರರು‌ ಉಪಸ್ಥಿತರಿದ್ದರು.