ಮಳೆ‌‌ ಅವಘಡ,‌‌‌‌‌‌‌ ‌ಜಿಲ್ಲೆಯಲ್ಲಿ‌ ಕಂಟ್ರೋಲ್ ರೂಂ ಸ್ಥಾಪನೆ, ಸಮಸ್ಯೆಯಾದರೆ‌ ಕರೆ‌ ಮಾಡಿ

help line

 

 

ಸುದ್ದಿ ಕಣಜ.ಕಾಂ | DISTRICT | CONTROL ROOM
ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ಹಾಗೂ ಮಳೆಯಿಂದ ತುಂಗಾ ನದಿಯಲ್ಲಿ ಹೆಚ್ಚಿನ ನೀರು ಬಂದು ಪ್ರವಾಹದ ಭೀತಿ ಇರುವ ಹಿನ್ನೆಲೆಯಲ್ಲಿ ಆಗುವ ಹಾನಿಯ ಬಗ್ಗೆ ಸಾರ್ವಜನಿಕರಿಂದ ಹಾಗೂ ಸರ್ಕಾರದಿಂದ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸಿ ಅಧಿಕಾರಿಗಳಿಗೆ ತಿಳಿಸಲು ಕಂಟ್ರೋಲ್ ರೂಂನ್ನು ಸ್ಥಾಪಿಸಲಾಗಿದೆ.
ಸಾರ್ವಜನಿಕರು ಜಿಲ್ಲೆ ಹಾಗೂ ಆಯಾ ತಾಲೂಕುಗಳಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂಗಳ ಪ್ರಯೋಜನ ಪಡೆಯಬೇಕೆಂದು ಅಪರ ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.
ಕಂಟ್ರೋಲ್ ‌ರೂಂ‌ ಸಂಖ್ಯೆಗಳು
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ – 08182-221010, 1077, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ – 08182-261413, 100, ಶಿವಮೊಗ್ಗ ತಹಸೀಲ್ದಾರ್ -08182-279311, ಭದ್ರಾವತಿ -08282-263466, ತೀರ್ಥಹಳ್ಳಿ -08181-228239, ಸಾಗರ -08183-226074, ಶಿಕಾರಿಪುರ -08187-222239, ಸೊರಬ -08184-272241/8904666991, ಹೊಸನಗರ -08185-221235 ಗಳನ್ನು ಸಂಪರ್ಕಿಸುವುದು.

One thought on “ಮಳೆ‌‌ ಅವಘಡ,‌‌‌‌‌‌‌ ‌ಜಿಲ್ಲೆಯಲ್ಲಿ‌ ಕಂಟ್ರೋಲ್ ರೂಂ ಸ್ಥಾಪನೆ, ಸಮಸ್ಯೆಯಾದರೆ‌ ಕರೆ‌ ಮಾಡಿ

Leave a Reply

Your email address will not be published. Required fields are marked *

error: Content is protected !!