ಪ್ಲಾಸ್ಟಿಕ್ ಡಿಪ್ಲೋಮಾ ಮಾಡಿದರೆ 100% ಉದ್ಯೋಗ

CIPET Plastic

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER 
ಶಿವಮೊಗ: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್-Central Institute of Petrochemicals Engineering and Technology) ಕೌಶಲ ಮತ್ತು ತಾಂತ್ರಿಕ ತರಬೇತಿ ಕೇಂದ್ರದ ವತಿಯಿಂದ 2022-23ನೇ ಸಾಲಿನ ಉದ್ಯೋಗಾರಿತ ಮತ್ತು ಶೇ.100 ಉದ್ಯೋಗ ಖಚಿತ ಡಿಪ್ಲೋಮಾ, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್/ಆಫ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

READ | ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ, ತರಬೇತಿ ಬಳಿಕ ಉದ್ಯೋಗ ಪಕ್ಕಾ

ಸಿಪೆಟ್ ಸಂಸ್ಥೆಯು ಕೇಂದ್ರ ಸರ್ಕಾರದ ರಾಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ದೇಶದ ಪಾಲಿಮರ್/ಪೆಟ್ರೋಕೆಮಿಕಲ್ಸ್/ ಪ್ಲಾಸ್ಟಿಕ್ಸ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡುತ್ತಿದೆ ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥ ಆರ್.ಟಿ. ನಾಗರಳ್ಳಿ ತಿಳಿಸಿದ್ದಾರೆ.
ತರಬೇತಿ ಅವಧಿ ಎಷ್ಟು?
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ(ಡಿಪಿಟಿ), ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ(ಡಿಪಿಎಂಟಿ) 3 ವರ್ಷಗಳು ಮತ್ತು ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸ್ಸಿಂಗ್ ಮತ್ತು ಟೆಸ್ಟಿಂಗ್(ಪಿಜಿಡಿ-ಪಿಪಿಟಿ) 2 ವರ್ಷಗಳ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಬಹುದು.
ಎಸ್.ಎಸ್.ಎಲ್.ಸಿ, ಪಿ.ಯು.ಸಿ.(ವಿಜ್ಞಾನ) ಮತ್ತು ಬಿ.ಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು/ ಹಾಜರಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ https://cipet2022.onlineregistrationform.org/CIPET/ ಅಥವಾ
ದೂ: 0821-2510618/ 9480253024/ 9791431827/ 9466585669 ಅನ್ನು ಸಂಪರ್ಕಿಸಬಹುದು.

https://suddikanaja.com/2022/02/28/mahatma-gandhi-national-rural-employment-guarantee-scheme-narega-has-given-life-to-the-farmers-in-the-district/

Leave a Reply

Your email address will not be published. Required fields are marked *

error: Content is protected !!