ಹೊಸಮನೆ ಚಾನಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರಿಗೆ ಜೈಲು ಶಿಕ್ಷೆ

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಹೊಸಮನೆ ಚಾನಲ್ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಳೆಯ ವೈಷಮ್ಯ ಹಿನ್ನೆಲೆ ವ್ಯಕ್ತಿಯೊಬ್ಬರ‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣ‌ ಸಂಬಂಧ ಮೂವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಶರಾವತಿ ನಗರ ನಿವಾಸಿ ಹರೀಶ್‌(24) ಎಂಬುವವರ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಿ‌ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಕೆ.ಎಸ್.ಮನು ತೀರ್ಪು‌ ನೀಡಿದ್ದಾರೆ.

READ | ಮಳೆ ಹಾನಿ ಬಗ್ಗೆ ಶಿವಮೊಗ್ಗದಲ್ಲಿ ನಡೀತು ಪ್ರಮುಖ ಸಭೆ, ಸೆಲ್ವಕುಮಾರ್ ನೀಡಿದ ಖಡಕ್ ಸೂಚನೆಗಳೇನು?

ಯಾರಿಗೆ ಎಷ್ಟು ವರ್ಷ ಶಿಕ್ಷೆ?
ಲಕ್ಷ್ಮೀ‌ ಟಾಕೀಸ್ ನಿವಾಸಿಗಳಾದ ಮಂಜುನಾಥ ಅಲಿಯಾಸ್ ಕಟ್ಟಿಂಗ್ ಶಾಪ್ ಮಂಜ(30), ಅನಿಲ್(26), ರಾಜೇಂದ್ರನಗರದ ಪ್ರಶಾಂತ್ ಅಲಿಯಾಸ್ ಕೊಡ್ಲಿ ಪ್ರಶಾಂತ್(26) ಇವರುಗಳ ವಿರುದ್ಧ ಐಪಿಸಿ ಕಲಂ 307 ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ 7 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು ₹40,000 ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 4 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ಮತ್ತು ಐಪಿಸಿ ಕಲಂ 324 ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ 2 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು ₹10,000 ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 1 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿದ್ದು, ಮೇಲ್ಕಂಡ ಶಿಕ್ಷೆಗಳು ಏಕ ಕಾಲದಲ್ಲಿ ಚಾಲ್ತಿಯಲ್ಲಿರುತ್ತವೆಂದು ಆದೇಶ ನೀಡಲಾಗಿದೆ.
ಹಳೆಯ ವೈಫಲ್ಯ ಹಿನ್ನೆಲೆ ಮಾರಣಾಂತಿಕ ಹಲ್ಲೆ
2016 ಜೂನ್‌ 17ರಂದು ಸಂಜೆ ಹರೀಶ್ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಚಾನಲ್ ಏರಿಯಾದಲ್ಲಿ ನಡೆದು ಹೋಗುತ್ತಿದ್ದಾಗ ಮಂಜ, ಅನಿಲ ಮತ್ತು ಪ್ರಶಾಂತ್ ಅವರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹರೀಶನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ದೂರಿನ ಮೇರೆಗೆ ಐಪಿಸಿ ಕಲಂ 307 ಸಹಿತ 34 ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆಗಿನ ತನಿಖಾಧಿಕಾರಿ ಅಭಯ್ ಪ್ರಕಾಶ್ ಸೋಮನಾಳ್ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ರತ್ನಮ್ಮ ವಾದ ಮಂಡಿಸಿದ್ದರು.

ಮಕ್ಕಳಿಗೆ ತಿಂಡಿ ತರಲು ಹೋದ ವ್ಯಕ್ತಿಯ ಮೇಲೆ ಮಚ್ಚು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ

Leave a Reply

Your email address will not be published.