ಈಸೂರಿನಲ್ಲಿ ‘ಅಮೃತ ಭಾರತಿಗೆ ಕನ್ನಡದ ಆರತಿ’

ಸುದ್ದಿ ಕಣಜ.ಕಾಂ | DISTRICT | ISURU 
ಶಿಕಾರಿಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಈಸೂರು ಗ್ರಾಮದಲ್ಲಿ ‘ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ ಶನಿವಾರ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ‘ಏಸೂರು ಕೊಟ್ಟರು ಈಸೂರು ಕೊಡೆವು’ ಘೋಷಣೆಯ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲೇ ‘ಸ್ವಾತಂತ್ರ್ಯ ಗ್ರಾಮ’ ಎಂದು ಘೋಷಿಸಿಕೊಂಡ ನಮ್ಮ ಈಸೂರಿನಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ನೆಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.

READ |ಸಹಕಾರ ಸಂಘಗಳಿಗೆ ಗುಡ್ ನ್ಯೂಸ್, ಷೇರು ಬಂಡವಾಳದಲ್ಲಿ ಹೆಚ್ಚಳ

ಔರಂಗಜೇಬನನ್ನು ಸೋಲಿಸಿದ ಚೆನ್ನಮ್ಮಾಜಿ
ಛತ್ರವತಿ ಶಿವಾಜಿ ಮಹಾರಾಜರ ಮಗ ರಾಜಾರಾಮನು ಮೊಗಲರನ್ನು ಎದುಲಿಸಲು ಯತ್ನಿಸಿದಾಗ ಔರಂಗಜೇಬನು ದೊಡ್ಡ ಸೈನ್ಯವನ್ನು ದಾಳಿಗೆ ಕಳಸುತ್ತಾನೆ. ಇದರಿಂದಾಗಿ ರಾಜಾರಾಮನು ಕೆಳದಿ ಸಂಸ್ಥಾನದಲ್ಲಿ ಆಶ್ರಯ ಕೇಳುತ್ತಾನೆ. ಆಗ ಕೆಳದಿ ರಾಣಿ ಚೆನ್ನಮ್ಮಾ ಅವರು ರಾಜಾರಾಮನಿಗೆ ಅಭಯ ನೀಡಿ ಯುದ್ಧ ಮಾಡುತ್ತಾರೆ. ಮೊಗಲ್ ಸುಲ್ತಾನ ಔರಂಗಜೇಬನ ಬಲಾಢ್ಯ ಸೈನ್ಯವನ್ನು ಸೋಲಿಸುತ್ತಾರೆ ಎಂದರು.
ಬ್ರಿಟಿಷರ ವಿರುದ್ಧ ಸಿಡಿದೆದ್ದ ಈಸೂರು
1942ರ ಸಪ್ಟೆಂಬರ್ ತಿಂಗಳ 25 ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ಘೋಷಣೆ, ಕೊನೆಗೆ, ಈ ಹೋರಾಟ ಸಂಘಟಿಸಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಸುಮಾರು ಒಂದು ವರ್ಷದ ಬಳಿಕ ಭಾರತ ಮಾತಾಕಿ ಜೈ ಎನ್ನುತ್ತಾ ನೇಣು ಹಗ್ಗಕ್ಕೆ ಕೊರಳುಕೊಟ್ಟ ಗುರುಪ್ಪ, ಜೀನಲ್ಲಿ ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ ಹಾಗೂ ಗೌಡ್ರು ಶಂಕರಪ್ಪ ಅವರ ಸ್ಮರಣೆಯೇ ನಮ್ಮಲ್ಲಿ ದೇಶಭಕ್ತಿಯ ಭಾವ ಹುಟ್ಟಿಸುತ್ತದೆ.
ಅಂದು ಈಸೂರು ಗ್ರಾಮದ ಜನತೆ ‘ಈಸೂರು ಸ್ವಾತಂತ್ರ್ಯ ಗ್ರಾಮ ಬ್ರಿಟಿಷರಿಗೆ ಪ್ರವೇಶವಿಲ್ಲ’ ಎಂಬ ನಾಮ ಫಲಕವನ್ನು ಊರ ಪ್ರವೇಶದ್ವಾರಕ್ಕೆ ಹಾಕಿದ್ದರು ಎಂದು ಹೇಳಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಸಾಮಾಜಿಕ ಚಿಂತಕ ಪ್ರಕಾಶ್ ಮಲ್ಪೆ, ಜಿಪಂ ಸಿಇಒ ಎಂ.ಎಲ್.ವೈಶಾಲಿ, ತಹಸಿಲ್ದಾರ್ ಕವಿರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚೆನ್ನವೀರಪ್ಪ, ಗ್ರಾಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

‘ಈಸೂರು’ ರೋಮಾಂಚನಕ್ಕೆ ಇನ್ನೊಂದು ಹೆಸರು, ಭಾರತೀಯರ ಸ್ವಾಭಿಮಾನದ ಪ್ರತೀಕವಾದ ಈ ಗ್ರಾಮ ಸ್ವಾತಂತ್ರ್ಯ ದಿನದಂದು ಮರಳಿ ಮರಳಿ ನೆನಪಿಗೆ ಬರುವುದು ಏಕೆ?

Leave a Reply

Your email address will not be published.