Police meeting | ಅಡಿಕೆ‌ ವರ್ತಕರೊಂದಿಗೆ ಪೊಲೀಸರ‌ ಮಹತ್ವದ ಸಭೆ, ಪ್ರಮುಖ 6 ಸೂಚನೆಗಳು

arecanut

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಎಪಿಎಂಸಿ ಮಾರುಕಟ್ಟೆ(APMC Market)ಯ ಅಡಿಕೆ ವರ್ತಕರ ಸಂಘ(arecanut Traders Association)ದ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಅಡಿಕೆ ವರ್ತಕರ ಸಭೆಯನ್ನು ನಡೆಸಿ ಮಹತ್ವದ ಸೂಚನೆಗಳನ್ನು ನೀಡಿದೆ.

READ | ಎಸ್.ಬಿ.ಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

arecanut meeting apmc
ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ವರ್ತಕರ ಸಂಘದ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಅಡಿಕೆ ವರ್ತಕರ ಸಭೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ಇತರರು ಉಪಸ್ಥಿತರಿದ್ದರು.

ನೀಡಿದ ಸೂಚನೆಗಳೇನು?

  1. ಅಡಿಕೆ ಮಂಡಿಗಳ ಮಾಲೀಕರು ಮುಂಜಾಗೃತಾ ಕ್ರಮವಾಗಿ ತಮ್ಮ ತಮ್ಮ ಮಂಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ(cctv camera)ಗಳನ್ನು ಅಳವಡಿಸಿಕೊಳ್ಳುವುದು.
  2. ಅಡಿಕೆಯನ್ನು ಸಾಗಾಟ ಮಾಡುವಾಗ ಮುಂಚಿತವಾಗಿ ವಾಹನಗಳ ಚಾಲಕರು ಮತ್ತು ಸಹಾಯಕರುಗಳ ಪೂರ್ವಾಪರವನ್ನು ಪರಿಶೀಲಿಸಿ ಅವರ ಮಾಹಿತಿಯನ್ನು ಖಚಿತ ಪಡಿಸಿಕೊಂಡ ನಂತರವೇ ಸಾಗಾಟ ಮಾಡುವುದು.
  3. ಅಡಿಕೆ ಮಂಡಿಗಳಲ್ಲಿ ಸಂಗ್ರಹಿಸಿರುವ ಮತ್ತು ಸಾಗಾಟ ಮಾಡುವ ಅಡಿಕೆಗೆ ವಿಮೆ(insurance)ಯನ್ನು ಮಾಡಿಸುವುದು.
  4. ಅಡಿಕೆ ಸಾಗಾಟ ಮಾಡುವಾಗ ಟ್ರಾನ್ಸ್ ಪೋರ್ಟ್ ಏಜನ್ಸಿ ಮತ್ತು ಮಾಲೀಕರ ಪೂರ್ವಾಪರವನ್ನು ಪರಿಶೀಲಿಸಿಕೊಳ್ಳುವುದು.
  5. ಅಡಿಕೆ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಗಳನ್ನು ಅಳವಡಿಸಿಕೊಳ್ಳುವುದು ಅಥವಾ ಜಿಪಿಎಸ್ ಅನ್ನು ಅಳವಡಿಸಿರುವ ವಾಹನಗಳಲ್ಲಿಯೇ ಅಡಿಕೆಯನ್ನು ಸಾಗಾಟ ಮಾಡುವುದು.
  6. ಯಾವುದೇ ಸಂಶಯ ಕಂಡುಬಂದಲ್ಲಿ ಅಥವಾ ತುರ್ತು ಸಹಾಯಕ್ಕಾಗಿ ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 9480803300/ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವುದು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ‌ಡಿವೈಎಸ್.ಪಿ ಉಮೇಶ್, ವಿನೋಬನಗರ, ಕೋಟೆ ಠಾಣೆಯ ಪಿಐಗಳು ಉಪಸ್ಥಿತರಿದ್ದರು.

https://suddikanaja.com/2022/11/29/today-arecacnut-rate-in-karnataka/

error: Content is protected !!