ಕಾಂಗ್ರೆಸ್ ಬುಡಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಹಾರ, ಸಿದ್ದರಾಮಯ್ಯ ವಿರುದ್ಧ ‘ಅಲೆಮಾರಿ’ ಪದಪ್ರಯೋಗ

KS Eshwarappa siddaramaih 1

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಆರ್.ಎಸ್.ಎಸ್. (RSS) ಮೂಲದ ಬಗ್ಗೆ ಮಾತನಾಡಿದ್ದೇ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (ks eshwarappa) ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಮೂಲಕ್ಕೆ ಪ್ರಹಾರ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಕರೆದಿದ್ದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಒಬ್ಬ ಅಲೆಮಾರಿ. ಅವರು ಕುರುಬ ಜಾತಿಯಲ್ಲಿ ಹುಟ್ಟಬಾರದಿತ್ತು. ವಿಪಕ್ಷ ನಾಯಕ ಅಥವಾ ಸಿಎಂ ಸ್ಥಾನಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಪ್ರತಿ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುತ್ತಾರೆ’ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಶಾಸಕ ಕೆ.ಎಸ್.ಈಶ್ವರಪ್ಪ ಮಾಡಿದ ಆರೋಪಗಳು (VIDEO REPORT)

READ | ಶಿವಮೊಗ್ಗದಲ್ಲಿ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರ ಪ್ರಮುಖ ಸಭೆ, ನೀಡಿದ ಸೂಚನೆಗಳೇನು?

ನೆಹರೂ ಮತ್ತು ಮೋದಿ ಅವರನ್ನು ಹೋಲಿಕೆ ಮಾಡಿ ನೀಡಿದ ಹೇಳಿಕೆ ಹಾಗೂ ಆರ್.ಎಸ್.ಎಸ್. ಸಂಘಟನೆ ವಿದೇಶಿ ಸಂಘಟನೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಈಶ್ವರಪ್ಪ, ಈ ಕೂಡಲೇ ಸಿದ್ಧರಾಮಯ್ಯ ಅವರು ಜನರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಭಾರತವನ್ನು ವಿಭಜಿಸಿದ್ದೇ ನೆಹರು
ಆರ್.ಎಸ್.ಎಸ್. ಸ್ವಾತಂತ್ರ್ಯ ಪೂರ್ವದಿಂದಲೂ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡಲು ಮತ್ತು ಹಿಂದುತ್ವ ಉಳಿಸಲು ಶ್ರಮಿಸುತ್ತಿದೆ. ನೆಹರು ಮತ್ತು ಅವರ ಸ್ನೇಹಿತರು ತಮ್ಮ ಅಧಿಕಾರದ ಆಸೆಗೆ ದೇಶವನ್ನು ಇಬ್ಭಾಗ ಮಾಡಿ ಹಿಂದೂಸ್ತಾನ ಮತ್ತು ಪಾಕಿಸ್ತಾನ ಎಂದು ಒಡೆದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ತೆಗೆದುಹಾಕಿದ್ದಾರೆ. ಇದು ಇವರಿಬ್ಬರ ನಡುವಿನ ವ್ಯತ್ಯಾಸ ಎಂದರು.
ಕಾಂಗ್ರೆಸ್ ಮೂಲದ ಮೇಲೆ ಪ್ರಹಾರ
ಸೋನಿಯಾ ಗಾಂಧಿ ಅವರು ವಿದೇಶಿಯರು. ಇಂದು ಕಾಂಗ್ರೆಸ್ ಇಟಲಿ ಪ್ರೇರಿತ ನಾಯಕತ್ವದ ಹಿಡಿತದಲ್ಲಿದೆ. ಹಿಂದೆ ಜೆಡಿಎಸ್ ನಲ್ಲಿದ್ದ ಸಿದ್ಧರಾಮಯ್ಯ ಅಧಿಕಾರಕ್ಕಾಗಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಅವರು ಆರ್.ಎಸ್.ಎಸ್. ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.
36,000 ದೇವಾಲಯ ಕೆಡವಿ ಮಸೀದಿ ನಿರ್ಮಾಣ
ಇತಿಹಾಸಕಾರರು ದೇಶದಲ್ಲಿ 36,000 ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ ಎಂದು ಸಂಶೋಧನೆಗಳ ಮೂಲಕ ತೋರಿಸಿದ್ದಾರೆ. ಅವುಗಳ ಮರು ನಿರ್ಮಾಣ ಆಗಬೇಕಿದೆ. ಕಾಶಿಯಲ್ಲಿ ಈಶ್ವರ ಲಿಂಗವಿರುವ ಜಾಗದ ನೀರು ಬಳಸದಂತೆ ಕೋರ್ಟ್ ಹೇಳಿದೆ. ಕಾಂಗ್ರೆಸ್ ನವರು ಕೋರ್ಟ್ ತೀರ್ಪಿಗೆ, ಸಂವಿಧಾನಕ್ಕೆ ಬೆಲೆ ಕೊಡಲ್ಲ ಎಂದು ಆರೋಪಿಸಿದರು.

https://suddikanaja.com/2020/11/17/ishwarappas-comments-on-congress-leaders/

Leave a Reply

Your email address will not be published. Required fields are marked *

error: Content is protected !!