KSRTC ಬಸ್ ನಿಲ್ದಾಣದಲ್ಲೇ ಕರ್ತವ್ಯನಿರತ ಚಾಲಕನ ಮೇಲೆ ಹಲ್ಲೆ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕರ್ತವ್ಯ ಮೇಲಿದ್ದ ಕೆಎಸ್.ಆರ್.ಟಿ.ಸಿ ಚಾಲಕನ ಮೇಲೆ ಇತ್ತೀಚೆಗೆ ಬಸ್ ನಿಲ್ದಾಣದ ಒಳಗಡೆಯೇ ಹಲ್ಲೆ ಮಾಡಲಾಗಿದೆ.
ಮೈಸೂರು-ಶಿವಮೊಗ್ಗ- ಹೊಸಪೇಟೆ ಬಸ್ ಚಾಲಕ ಸೋಮಲಿಂಗಪ್ಪ(38) ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಈತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಇರ್ಷಾದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.

READ | ಬಿಜೆಪಿ ಮುಖಂಡ ಭಾನುಪ್ರಕಾಶ್ ಪುತ್ರನಿದ್ದ ಕಾರಿನ ಮೇಲೆ ಅಟ್ಯಾಕ್, ಕೆಲಹೊತ್ತು ಉದ್ವಿಗ್ನ ಸ್ಥಿತಿ

ಬಸ್ ಅನ್ನು ಅಡ್ಡಗಟ್ಟಲು ಯತ್ನ
ಶಿವಮೊಗ್ಗ ಬೈಪಾಸ್ ನಲ್ಲಿ ರಸ್ತೆ ನಡುವೆ ಬಸ್ಸಿಗೆ ಅಡ್ಡಗಟ್ಟಲು ಯತ್ನಿಸಿದ್ದಾರೆ. ಆಗ ಪ್ರಯಾಣಿಕರಿದ್ದರಿಂದ ಅಲ್ಲಿಂದ ತಪ್ಪಿಸಿಕೊಂಡು ಚಾಲಕ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ, ಬೈಕ್ ನಲ್ಲಿಯೇ ಹಿಂಬಾಲಿಸಿಕೊಂಡು ಬಂದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿಯೇ ಇದ್ದ ಇನ್ನುಳಿದ ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ಇರ್ಷಾದ್ ಒಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಉಳಿದವರು ಓಡಿಹೋಗಿದ್ದಾರೆ. ಗಾಯಗೊಂಡಿರುವ ಸೋಮಲಿಂಗಪ್ಪ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!