ಶಿವಮೊಗ್ಗ ನಗರದಲ್ಲಿ‌ ತುಂಗೆ ಪ್ರವಾಹ ತಪ್ಪಿಸಲು ಮಾಸ್ಟರ್‌ ಪ್ಲ್ಯಾನ್

 

 

ಸುದ್ದಿ ಕಣಜ.ಕಾಂ | CITY | SHIVAMOGGA CORPORATION
ಶಿವಮೊಗ್ಗ: ಮಳೆಗಾಲದಲ್ಲಿ ಗಾಜನೂರು ಜಲಾಶಯದಿಂದ ನೀರು ಬಿಡುವುದಕ್ಕೂ ಮುನ್ನ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ, ಜಲಾಶಯದ‌ ಎಂಜಿನಿಯರ್ ಅವರೊಂದಿಗೆ ಸಮಾಲೋಚನೆ ಮಾಡುವುದು ಕಡ್ಡಾಯ ಎಂದು ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮೇಯರ್, ಮಳೆಗಾಲದಲ್ಲಿ ಅತಿಯಾಗಿ ನೀರು ಬಿಡುಗಡೆ ಮಾಡುವುದರಿಂದ ಪ್ರವಾಹ‌ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ‌ ಕ್ರಮ ಅಗತ್ಯ ಎಂದು ತಿಳಿಸಿದರು.

READ | ಶಿವಮೊಗ್ಗ ಜಿಲ್ಲೆಯ ನ್ಯಾಯಬೆಲೆ‌ ಅಂಗಡಿಯಲ್ಲಿ‌ ಸಿಗಲಿದೆ‌ ಸಾರವರ್ಧಿತ ಅಕ್ಕಿ‌, ಆರೋಗ್ಯಕ್ಕೆ‌ ಏನೆಲ್ಲ ಪ್ರಯೋಜನ, ಯಾರೆಲ್ಲ ಪಡೆಯಬಹುದು?

ಪಾಲಿಕೆ ಸದಸ್ಯೆ ರೇಖಾ‌ ರಂಗನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಪಾಲಿಕೆ ಮುಖ್ಯ ಎಂಜಿನಿಯರ್ ಡಂಕಪ್ಪ, ಒಟ್ಟು 13 ಪ್ಯಾಕೇಜ್‌ ಗೆ ಹೂಳು ತೆಗೆಯುವ ಟೆಂಡರ್ ಆಗಿದ್ದು, 8 ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಮುಗಿಸಲಾಗುವುದು ಎಂದರು.
ಜಲ ಬಾಧೆಗೆ ಪರಿಹಾರ ನೀಡಿ
ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ ಮತ್ತು ನಾಗರಾಜ್ ಕಂಕಾರಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಟೆಂಡರ್ ಆದ ಕಾಮಗಾರಿಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
 ಸಭೆಯಲ್ಲಿ ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಮಾಯಣ್ಣ ಗೌಡ ಇತರರು ಉಪಸ್ಥಿತರಿದ್ದರು.

error: Content is protected !!