ಶಿವಮೊಗ್ಗದ ಜಲಾಶಯಗಳಲ್ಲಿರುವ ನೀರಿನ ಪ್ರಮಾಣವೆಷ್ಟು?

Gajanur Dam

 

 

ಸುದ್ದಿ ಕಣಜ.ಕಾಂ | DISTRICT | WATER LEVEL
ಶಿವಮೊಗ್ಗ: ನಿರಂತರ ಮಳೆಯಿಂದಾಗಿ ತುಂಗಾ ಜಲಾಶಯದ ಐದು ಕ್ರಸ್ಟ್ ಗೇಟ್ ಗಳನ್ನು ತೆರೆಯಲಾಗಿದ್ದು, ಪ್ರಸ್ತುತ 11,976 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ 1197 ಕ್ಯೂಸೆಕ್ಸ್ ಒಳಹರಿವು ಇದೆ.
ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 1819 ಅಡಿ ಇದ್ದು, ಪ್ರಸ್ತುತ 1763.65 ಅಡಿ ನೀರಿದೆ. ಜಲಾನಯನ ಪ್ರದೇಶದಲ್ಲಿ 54.2 ಎಂಎಂ ಮಳೆಯಾಗಿದ್ದು, 11125 ಕ್ಯೂಸೆಕ್ಸ್ ಒಳಹರಿವು ಇದೆ.
ಭದ್ರಾ ಜಲಾಶಯದ ಪೂರ್ಣ ಮಟ್ಟ 186 ಅಡಿ ಇದ್ದು, ಪ್ರಸ್ತುತ 149.7 ಅಡಿ ನೀರು ಲಭ್ಯವಿದೆ. 7799 ಕ್ಯೂಸೆಕ್ಸ್ ಒಳಹರಿವು ಇದೆ. ಜಿಲ್ಲೆಯ ಬಹುತೇಕ ಎಲ್ಲ ಕೆರೆ, ಕಟ್ಟೆಗಳು ಭರ್ತಿಯಾಗಿದ್ದು, ಚಂಡಮಾರುತದ ಪ್ರಭಾವ ಇದೇ ರೀತಿ ಮುಂದುವರಿದರೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ. ಮಾಣಿ ಜಲಾಯದಲ್ಲಿ 571.26 ಮೀಟರ್ ನೀರಿದ್ದು, 380 ಕ್ಯೂಸೆಕ್ಸ್ ಒಳಹರಿವು ಇದೆ.

READ | ಶಿವಮೊಗ್ಗದಲ್ಲಿ ಹಲವು ಮನೆಗಳಿಗೆ ಹಾನಿ, ಹೆಕ್ಟೇರ್ ಗಟ್ಟಲೇ ಕೃಷಿ ಭೂಮಿ ಜಲಾವೃತ

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ
ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ಬೆಳಗ್ಗೆ ಅಲ್ಪಮಟ್ಟಿಗೆ ಮಳೆಯಾಗಿದ್ದು, ಪ್ರವಾಹ ಇಳಿಕೆಯಾಗಿದೆ. ಚಾನಲ್ ಗಳು ತುಂಬಿಕೊಂಡಿದ್ದು, ವರ್ಷಧಾರೆ ಕಡಿಮೆಯಾಗಿರುವುದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಚಾನಲ್ ಭಾಗದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಹಲವೆಡೆ ಸಮಸ್ಯೆಯಾಗಿದೆ.

https://suddikanaja.com/2021/07/15/rain-in-shivamogga-5/

Leave a Reply

Your email address will not be published. Required fields are marked *

error: Content is protected !!