ಅಕ್ಷಯ ತೃತೀಯ ಬಳಿಕ ಚಿನ್ನದ ಬೆಲೆಯಲ್ಲಿ ಏರಿಳಿತ, ಇಂದಿನ ಚಿನ್ನ, ಬೆಳ್ಳಿ ದರ

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಅಕ್ಷಯ ತೃತೀಯದ ಬಳಿಕ ರಾಜ್ಯದಲ್ಲಿ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಶುಕ್ರವಾರವಷ್ಟೇ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 320 ರೂಪಾಯಿ ಇಳಿಕೆ ಕಂಡು 51,380 ರೂ. ದರ ನಿಗದಿಯಾಗಿತ್ತು. ಆದರೆ, ವಾರಾಂತ್ಯದಲ್ಲಿ 330 ರೂ. ಏರಿಕೆಯಾಗಿದ್ದು, ಇಂದು 51,710 ರೂ. ಬೆಲೆ ಇದೆ.
ಕಳೆದ ಏಪ್ರಿಲ್ 30ರಿಂದ ನಿರಂತರ ಹಳದಿ ಲೋಹದ ಬೆಲೆಯು ಇಳಿಕೆಯಾಗುತ್ತಲೇ ಸಾಗಿತ್ತು. ಆದರೆ, ಏಪ್ರಿಲ್ 5 ಮತ್ತು 7ರಂದು ಏರಿಕೆಯಾಗಿದೆ.

READ | ಶಿವಮೊಗ್ಗದಲ್ಲಿ ಇಂದಿನಿಂದ ‘ಪುನೀತ್ ರಾಜಕುಮಾರ್ ಕಪ್’ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿ, ವಿವಿಧ ರಾಜ್ಯಗಳ ತಂಡಗಳು ಭಾಗಿ

ಬೆಳ್ಳಿ ಬೆಲೆಯಲ್ಲಿ ಇಳಿಕೆ
ಶುಕ್ರವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 68,800 ರೂಪಾಯಿ ಇದೆ. ಏಪ್ರಿಲ್ 20ರಿಂದೀಚೆಗೆ ನಿರಂತರ ಇಳಿಕೆಯಾಗುತ್ತಲೇ ಸಾಗಿದೆ. ಇಂದು ಪ್ರತಿ ಕೆಜಿಗೆ 200 ರೂ. ಇಳಿಮುಖವಾಗಿದೆ.

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ (KG)
ಮೇ 1 48,390 52,790 69,500
ಮೇ 2 47,200 51,510 67,600
ಮೇ 3 74,200 51,510 67,000
ಮೇ 4 47,000 51,280 67,000
ಮೇ 5 47,400 51,700 67,700
ಮೇ 6 74,100 51,380 66,500
ಮೇ 7 47,400 51,710 66,800

error: Content is protected !!