ಶಿವಮೊಗ್ಗದ ಹಲವು ಪಂಚಾಯಿತಿಗಳಿಗೆ ಚುನಾವಣೆ ಫಿಕ್ಸ್, ಯಾವ್ಯಾವ ಗ್ರಾಪಂಗಳಲ್ಲಿ ಎಲೆಕ್ಷನ್

 

 

ಸುದ್ದಿ ಕಣಜ.ಕಾಂ | DISTRICT | ELECTION
ಶಿವಮೊಗ್ಗ: ವಿವಿಧ ಕಾರಣಗಳಿಂದ ತೆರವಾಗಿದ್ದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಚುನಾವಣೆ ಆಯೋಗವು ಚುನಾವಣೆ ವೇಳಾಪಟ್ಟಿಯನ್ನು ಹೊರಡಿಸಿದೆ.

READ | ಹಿಂದೂ ಹರ್ಷ ಹತ್ಯೆ ಪ್ರಕರಣ, ಆರೋಪಿಗಳು ಎನ್‍ಐಎ ವಶಕ್ಕೆ

ಚುನಾವಣೆ ವೇಳಾಪಟ್ಟಿ
ಮೇ 10ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. 11ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕವಾಗಿರುತ್ತದೆ. ಮೇ 13 ಉಮೇದುವಾರಿಕೆಗಳನ್ನು ಹಿಂತೆಗೆಯುವ ಕೊನೆ ದಿನವಾಗಿದೆ. 20ರಂದು ಅವಶ್ಯವಿದ್ದರೆ ಮತದಾನವು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿವೆ. 21ರಂದು ಮರು ಮತದಾನದ ಅವಶ್ಯವಿದ್ದರೆ ಮತದಾನವನ್ನು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಸಬಹುದು. 22ರಂದು ಮತಗಳ ಎಣಿಕೆಯು ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿವೆ.

ಯಾವ ಪಂಚಾಯಿತಿಗಳಿಗೆ ಚುನಾವಣೆ
ಗ್ರಾಪಂ ಕ್ಷೇತ್ರ ಮೀಸಲಾತಿ ಸಂಖ್ಯೆ
ಬಾಳೇಕೊಪ್ಪ(ಶಿವಮೊಗ್ಗ) ಬಾಳೇಕೊಪ್ಪ-1 ಎಸ್.ಟಿ ಮಹಿಳೆ 1
ಗೌತಮಪುರ(ಸಾಗರ) ಕಣ್ಣೂರು-2 ಎಸ್.ಟಿ ಮಹಿಳೆ 1
ಸೈದೂರು(ಸಾಗರ) ತಡಗಳಲೆ-1 ಬಿಸಿಎಂಬಿ 1
ಗೊಗ್ಗ(ಶಿಕಾರಿಪುರ) ಗೊಗ್ಗ-2 ಎಸ್.ಟಿ ಮಹಿಳೆ 1
ಬೇಗೂರು(ಶಿಕಾರಿಪುರ) ಬೇಗೂರು-2 ಸಾಮಾನ್ಯ ಮಹಿಳೆ 1

NOTIFICATION

error: Content is protected !!