ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಯಾರೆಲ್ಲ‌ ಅರ್ಜಿ ಸಲ್ಲಿಸಬಹುದು?

IMG 20220517 232257 102

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಶಿವಮೊಗ್ಗ: ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಸಾಂದರ್ಭಿಕ ಸುದ್ದಿ ಸಂಪಾದಕರು, ವರದಿಗಾರರು ಹಾಗೂ ಸಾಂದರ್ಭಿಕ ಸುದ್ದಿ ವಾಚಕರು- ಅನುವಾದಕಾರರನ್ನು ನೇಮಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಯಾರೆಲ್ಲ‌‌ ಅರ್ಜಿ ಸಲ್ಲಿಸಬಹುದು, ಅರ್ಹತೆಗಳೇನು?
ಸಾಂದರ್ಭಿಕ ಸುದ್ದಿ ಸಂಪಾದಕರು/ ವರದಿಗಾರರ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು, ಪದವಿ ಅಥವಾ ಪತ್ರಿಕೋದ್ಯಮ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಕನಿಷ್ಠ 1 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಪಡೆದಿರಬೇಕು ಅಥವಾ ಮುದ್ರಣ/ವಿದ್ಯುನ್ಮಾನ ಮಾಧ್ಯಮದಲ್ಲಿ ವರದಿಗಾರಿಕೆ/ ಸಂಪಾದಕತ್ವ ಕೆಲಸದಲ್ಲಿ 5 ವರ್ಷ ಅನುಭವ ಇರಬೇಕು. ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳಿವಳಿಕೆ, ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಇದ್ದು, ವಯಸ್ಸು 21 ರಿಂದ 50 ವರ್ಷದೊಳಗಿರಬೇಕು.
ಸಾಂದರ್ಭಿಕ ಸುದ್ದಿ ವಾಚಕರು- ಅನುವಾದಕಾರರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು, ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು ಹಾಗೂ ಪ್ರಸಾರಕ್ಕೆ ಯೋಗ್ಯವಾದ ಉತ್ತಮ ಗುಣಮಟ್ಟದ ಧ್ವನಿ ಹೊಂದಿರಬೇಕು. ರೇಡಿಯೋ/ ಟಿವಿ ಸುದ್ದಿಮಾಧ್ಯಮ ಕೆಲಸ ಅನುಭವ, ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳಿವಳಿಕೆ ಇದ್ದು 21 ರಿಂದ 50 ವರ್ಷ ವಯೋಮಿತಿಯೊಳಗಿರಬೇಕು.

READ | ಪತ್ರಿಕೋದ್ಯಮ ಪಾಸ್ ಆದವರಿಗೆ ಸುವರ್ಣ ಅವಕಾಶ

ಅರ್ಜಿ ಶುಲ್ಕ
ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ ₹300, ಎಸ್‍ಸಿ/ಎಸ್‍ಟಿ/ಓಬಿಸಿ ರೂ.225 ಇದ್ದು The Station Director, All India Radio, Bengaluru ಇವರ ಹೆಸರಿನಲ್ಲಿ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕು. ಅಭ್ಯರ್ಥಿಯ ಪೂರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಹಾಗೂ ಅರ್ಜಿ ಶುಲ್ಕದ ಬ್ಯಾಂಕ್ ಡ್ರಾಫ್ಟ್ ಅನ್ನು ಒಳಗೊಂಡ ಅರ್ಜಿಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಖುದ್ದಾಗಿ ಜೂನ್ 10 ರೊಳಗೆ ತಲುಪುವಂತೆ ದಿ ಡೆಪ್ಯುಟಿ ಜನರಲ್, (ಇ) & ಎಚ್‍.ಓಓ, Attn: ರೀಜನಲ್ ನ್ಯೂಸ್ ಯುನಿಟ್, ಆಲ್ ಇಂಡಿಯಾ ರೇಡಿಯೋ, ರಾಜ್‍ ಭವನ್ ರಸ್ತೆ, ಬೆಂಗಳೂರು 560001 ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗೆ ದೂ.ಸಂ 8317466729/ 9448159726/ 9482169168/ 080-22356344/ 22373000 ಅನ್ನು ಸಂಪರ್ಕಿಸಬಹುದೆಂದು ಪ್ರಸಾರ ಭಾರತಿ ಪ್ರಕಟಣೆ ತಿಳಿಸಿದೆ.

https://suddikanaja.com/2021/02/03/casual-leave-for-treatment-of-cancer-to-government-employees/

Leave a Reply

Your email address will not be published. Required fields are marked *

error: Content is protected !!