ಮಲೆನಾಡಿಗರಿಗೆ ಸೂರ್ಯನ ದರ್ಶನ, ಮರಳಿ ಹಳಿಗೆ ಬಂದ ಜನಜೀವನ

rain

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅಸಾನಿ ಚಂಡಮಾರುತದಿಂದಾಗಿ ಮೋಡ ಕವಿದ ವಾತಾವರಣ ಹಾಗೂ ನಿರಂತರ ಮಳೆ ಇತ್ತು. ಪರಿಣಾಮ ಮಲೆನಾಡಿಗರಿಗೆ ಸೂರ್ಯನ ದರ್ಶನವೇ ಆಗಿರಲಿಲ್ಲ. ಆದರೆ, ಭಾನುವಾರು ನಭದಲ್ಲಿ ಭಾನು ಮೂಡಿಬಂದಿದ್ದು, ಥಂಡಿ ಕವಿದಿದ್ದ ಶಿವಮೊಗ್ಗ ಬಿಸಿಲಿಗೆ ಮೈಯೊಡ್ಡಿದೆ.

READ | ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರಿ ಇಳಿಕೆ, ಇಂದಿನ ಬೆಲೆಯೆಷ್ಟು?

ಜಡಿ‌‌ ಮತ್ತು ಜಿಟಿ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದ್ದ ಕೆರೆ, ಕಾಲುವೆಗಳು ಶಾಂತವಾಗಿವೆ. ನೆರೆಪೀಡಿತ ಪ್ರದೇಶಗಳಲ್ಲಿ ನೀರಿನ ಪ್ರಮಾಣ‌ ಕಡಿಮೆಯಾಗಿದ್ದು, ಅಪಾರ ಹಾನಿಯುಂಟಾಗಿದೆ. ಅಸ್ತವ್ಯಸ್ತಗೊಂಡಿದ್ದ ಜನಜೀವನ ಮರಳಿ ಹಳಿಗೆ ಬರಲಾರಂಭಿಸಿದೆ. ವರ್ಷಧಾರೆ ಸೃಷ್ಟಿಸಿದ‌ ಆತಂಕದಿಂದ‌ ಜನ ಈಗ ಸುಧಾರಿಸಿಕೊಳ್ಳಲಾರಂಭಿಸಿದ್ದಾರೆ.
ಹವಾಮಾನ ಇಲಾಖೆ ಇನ್ನಷ್ಟು ದಿನ ಮಳೆಯಾಗುವ ಮುನ್ನೆಚ್ಚರಿಕೆಯನ್ನು‌ ನೀಡಿತ್ತು. ಆದರೆ, ಅದಕ್ಕೂ ಮುನ್ನವೇ ಮಳೆ‌ರಾಯ ಶಾಂತನಾಗಿದ್ದಾನೆ.‌
ಶುರುವಾಯ್ತು ದುರಸ್ತಿ, ತೇಪೆ‌ ಹಾಕುವ ಕೆಲಸ
ಮಹಾನಗರ ಪಾಲಿಕೆ ಈಗ ಎಚ್ಚತ್ತುಕೊಂಡಿದ್ದು ಹೂಳು ತೆಗೆಯುವ ಕಾರ್ಯಕ್ಕೆ ಕೈಹಾಕಿದೆ. ಹಲವೆಡೆ ತುಂಬಿಕೊಂಡಿರುವ ಹೂಳು‌ ತೆಗೆಯುವ ಕೆಲಸ ನಡೆದಿದೆ. ಹಾಳಾದ ರಸ್ತೆಗಳಿಗೆ‌ ಕಾಂಕ್ರಿಟ್ ಮತ್ತು ಚರಂಡಿಗಳ ದುರಸ್ತಿ ಕೆಲಸ ಸಾಗಿದೆ.

https://suddikanaja.com/2021/08/15/first-independent-village-issuru-movement/

Leave a Reply

Your email address will not be published. Required fields are marked *

error: Content is protected !!