
ಸುದ್ದಿ ಕಣಜ.ಕಾಂ | DISTRICT | LOK ADALAT
ಶಿವಮೊಗ್ಗ: ಕಳೆದ ವರ್ಷ ಫೆಬ್ರವರಿಯಲ್ಲಿ ಪುತ್ರನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಲೋಕ್ ಅದಾಲತ್ (Lok Adalat) ಮೂಲಕ ನ್ಯಾಯ ಲಭಿಸಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶರತ್ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ಇತ್ಯರ್ಥಗೊಳಿಸಿರುವ ನ್ಯಾಯಾಲಯವು ಕುಟುಂಬಕ್ಕೆ ವಿಮಾ ಕಂಪನಿಯಿಂದ 28 ಲಕ್ಷ ರೂಪಾಯಿ ಪರಿಹಾರ ಕಲ್ಪಿಸುವಂತೆ ಮಾಡಿದ್ದು ಶರತ್ ಪೋಷಕರಿಗೆ ಶನಿವಾರ ಚೆಕ್ ನೀಡಲಾಗಿದೆ.
READ | ಚಾಕ್ಲೆಟ್ ಕೊಡಿಸುವುದಾಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನಿಗೆ 20 ವರ್ಷ ಜೈಲು
ಜಿಲ್ಲೆಯಲ್ಲಿ 12,576 ಪ್ರಕರಣಗಳ ಇತ್ಯರ್ಥ
ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ 7,194 ಹಾಗೂ 5,382 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 12,576 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಎಷ್ಟು ಪೀಠಗಳ ಕಾರ್ಯನಿರ್ವಹಣೆ?
ಶಿವಮೊಗ್ಗ ನಗರದಲ್ಲಿ 14, ಭದ್ರಾವತಿಯಲ್ಲಿ 7, ಹೊಸನಗರದಲ್ಲಿ 2, ಸಾಗರದಲ್ಲಿ 3, ಶಿಕಾರಿಪುರದಲ್ಲಿ 4, ಸೊರಬದಲ್ಲಿ 3, ತೀರ್ಥಹಳ್ಳಿಯಲ್ಲಿ 4 ಪೀಠಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ಹುಸೇನ್ ಮುಸ್ತಫಾ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ವಾಜಪೇಯಿ ಬಡಾವಣೆ ಸಮಸ್ಯೆ 3 ತಿಂಗಳಲ್ಲಿ ಇತ್ಯರ್ಥ, ನಿವೇಶನ ಕೋರಿ ಸಲ್ಲಿಸಿದ ಎಷ್ಟು ಅರ್ಜಿಗಳಲ್ಲಿ ಲೋಪವಿದೆ ಗೊತ್ತಾ?