ಶಿವಮೊಗ್ಗದಲ್ಲಿ ರೈಲು ತಡೆ, 40ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದ ಪೊಲೀಸ್

ಸುದ್ದಿ ಕಣಜ.ಕಾಂ | CITY | YOUTH CONGRESS
ಶಿವಮೊಗ್ಗ: ದೇಶದ ಭದ್ರತೆಗೆ ಅಪಾಯ, ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಲಿರುವ ‘ಅಗ್ನಿಪಥ್’ ಯೋಜನೆ (agneepath scheme)ಯನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ನಗರದಲ್ಲಿ ರೈಲು ತಡೆ ಚಳವಳಿ ಮಾಡಲಾಯಿತು. ಈ ವೇಳೆ 40ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗ ಅಪಾಯಕಾರಿ ಆಗಬಲ್ಲ ‘ಅಗ್ನಿಪಥ್’ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಬೇಕು. ಈಗಿರುವ ಯಥಾಸ್ಥಿತಿಯಲ್ಲಿ ಸೇನಾ ನೇಮಕಾತಿ ಯೋಜನೆ ಅಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

READ | ವಿಶ್ವ ಮೊಸಳೆಗಳ ದಿನ, ಜಗತ್ತಿನ ದೊಡ್ಡ ಮೊಸಳೆ ಯಾವುದು? ಎಷ್ಟು ಪ್ರಕಾರದ ಮೊಸಳೆಗಳಿವೆ, ಇಲ್ಲಿವೆ ಮೊಸಳೆ ಜಗತ್ತಿನ ಸ್ವಾರಸ್ಯ ವಿಚಾರಗಳು

ಈಗಾಗಲೇ ಕರಾಳ ಕೃಷಿ ಕಾಯ್ದೆಗಳನ್ನು ತರಲು ಹೋಗಿ ದೇಶದ ಅನ್ನದಾತ ರೈತರನ್ನು ಬಲಿಕೊಡಲು ಹೊರಟಿರುವ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರ, ಈಗ ಸೇನಾ ನೇಮಕಾತಿಯಲ್ಲಿ ‘ಅಗ್ನಿಪಥ್’ ಅವೈಜ್ಞಾನಿಕ ಯೋಜನೆಯನ್ನು ಘೋಷಿಸಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್.ಕುಮಾರೇಶ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಈ.ಟಿ.ನಿತಿನ್, ಭದ್ರಾವತಿ ಅಧ್ಯಕ್ಷ ವಿನೋದ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಕಲ್ಲು ತೂರಾಟ ಕೇಸ್, 9 ಜನರನ್ನು ಅರೆಸ್ಟ್ ಮಾಡಿದ ಪೊಲೀಸ್

Leave a Reply

Your email address will not be published.