‘ವಿಂಡೋಸೀಟ್’ ರಿಲೀಸಿಂಗ್ ಡೇಟ್ ಫಿಕ್ಸ್, ಕಥಾ ಹಂದರ ಬಿಚ್ಚಿಟ್ಟ ಶಿವಮೊಗ್ಗದವರೇ ಆದ ಶೀತಲ್ ಶೆಟ್ಟಿ

ಸುದ್ದಿ ಕಣಜ.ಕಾಂ | DISTRICT | CINEMA 
ಶಿವಮೊಗ್ಗ: ಶೀತಲ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರ ‘ವಿಂಡೋ ಸೀಟ್’ (Window seat) ರಿಲೀಸಿಂಗ್ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಟೀಸರ್ ಗೆ ನಟ ಕಿಚ್ಚ ಸುದೀಪ್ (kiccha sudeep) ಶ್ಲಾಘಿಸಿದರು.
ಈ ಕುರಿತು ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಿರೂಪಕಿ, ಚಿತ್ರ ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ(Sheetal shetty), ವಿಂಡೋಸೀಟ್ ಹಲವು ಕೌತುಕದ ಜತೆಗೆ ಪ್ರೇಮದ ಹಂದರ ಹೊಂದಿರುವ ಚಿತ್ರವಾಗಿದೆ. ಮಧುರ ಪ್ರೇಮ ಕಥೆ ಹೊಂದಿದೆ. ಚಲನಚಿತ್ರ ಜುಲೈ 1ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ ಎಂದು ತಿಳಿಸಿದರು.
‘ಕನ್ನಡದ ಸುದ್ದಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ನಂತರ ನಿರ್ದೇಶನದ ಸಾಗಿದ್ದು, ಒಂದೆರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇದು ನನಗೆ ಸ್ಫೂರ್ತಿ ತುಂಬಿದದೆ. ನಿರ್ದೇಶಕನಿಗಿರಬೇಕಾದ ಎಲ್ಲ ವಿಷಯಗಳತ್ತ ಗಮನ ಹರಿಸಿ ಕಲಿತು ಈ ಚಿತ್ರ ನಿರ್ದೇಶನ ಮಾಡಿದ್ದೇನೆ ಎಂದರು.

READ | ನಾಲ್ಕೂವರೆ ಗಂಟೆ ಆಪರೇಷನ್ ಬಳಿಕ ಸೆರೆ ಸಿಕ್ಕ ಚಿರತೆ

ಚಿತ್ರದಲ್ಲಿ ಯಾರಿದ್ದಾರೆ?
ವಿಂಡೋಸೀಟ್ ಚಿತ್ರದಲ್ಲಿ ನಾಯಕ ನಟನಾಗಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ, ನಾಯಕಿಯರಾಗಿ ಅಮೃತ್ ಅಯ್ಯಂಗಾರ್ ಮತ್ತು ಸಂಜನಾ ಆನಂದ್, ಮುಖ್ಯ ಕಲಾವಿದರಾಗಿ ರವಿಶಂಕರ್, ಮಧುಸೂದನರಾವ್, ರೇಖಾ ನಾಯ್ಡು, ಕಾಮಿಡಿ ಕಿಲಾಡಿ ಸೂರಜ್ ತಾರಾಗಣದಲ್ಲಿದ್ದಾರೆ.
ಚಿತ್ರದ ನಿರ್ಮಾಣವನ್ನು ಮಂಜುನಾಥಗೌಡ ಅವರು ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿದ್ದಾರೆ. ವಿಘ್ನೇಶ್ ರಾಜ್ ಛಾಯಾಗ್ರಹಣ, ಯೋಗರಾಜ್ ಭಟ್ ಹಾಗೂ ಕವಿರಾಜ್ ಗೀತೆ ರಚನೆ ಮಾಡಿದ್ದಾರೆ. ಹಾಡುಗಳು ಇಂಪಾಗಿವೆ ಎಂದು ಹೇಳಿದರು.
ನಾನೂ ಶಿವಮೊಗ್ಗದವಳೆ…
‘ನಾನು ಶಿವಮೊಗ್ಗದವಳೆ ಆಗಿದ್ದೇನೆ. ನಮ್ಮೂರು ಆಯನೂರು. ಈ ಜಿಲ್ಲೆಯ ಬಗ್ಗೆ ನನಗೆ ಹೆಮ್ಮೆ ಇದೆ. ತಾಳಗುಪ್ಪ ಮತ್ತು ಸಾಗರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಮಲೆನಾಡಿನ ಹಸಿರಿನ ಸೊಬಗು ದೃಶ್ಯಗಳಲ್ಲಿ ಮೂಡಿಬಂದು ಚೇತೋಹಾರಿಯಾಗಿದೆ. ಶಿವಮೊಗ್ಗದ ಜನತೆ ಇದನ್ನು ತುಂಬಾ ಇಷ್ಟ ಪಡುತ್ತಾರೆ ಎಂಬ ವಿಶ್ವಾಸವಿದೆ. ಪ್ರೇಕ್ಷಕರು ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು’ ಎಂದು ಮನವಿ ಮಾಡಿದರು.

READ | ವಿಶ್ವ ಮೊಸಳೆಗಳ ದಿನ, ಜಗತ್ತಿನ ದೊಡ್ಡ ಮೊಸಳೆ ಯಾವುದು? ಎಷ್ಟು ಪ್ರಕಾರದ ಮೊಸಳೆಗಳಿವೆ, ಇಲ್ಲಿವೆ ಮೊಸಳೆ ಜಗತ್ತಿನ ಸ್ವಾರಸ್ಯ ವಿಚಾರಗಳು

ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್
‘ನಾಯಕ ರಘು ಈ ಚಿತ್ರದಲ್ಲಿ ಒಬ್ಬ ಹಾಡುಗಾರ. ಅವನು ತನ್ನ ದೈನಂದಿನ ಪ್ರಯಾಣದಲ್ಲಿ ರೈಲಿನ ವಿಂಡೋ ಸೀಟ್ ಪಕ್ಕ ಕುಳಿತಿರುತ್ತಾನೆ. ಅವನಲ್ಲಿ ಪ್ರೀತಿ ಅಂಕುರವಾಗಿ ಅದೇ ಅವನ ಜೀವನದ ಹಲವು ವಿಚಾರಗಳನ್ನು ಬದಲಿಸುತ್ತದೆ. ಏಳುಬೀಳುಗಳೊಂದಿಗೆ ಸಾಗುವ ನಾಯಕ ನಟನ ಬದುಕು ನಾನಾ ತೊಡಕು, ಕಟ್ಟುಪಾಡುಗಳನ್ನು ಎದುರಿಸುತ್ತಾನೆ. ಇವೆಲ್ಲ ವಿಂಡೋಸೀಟಿನ ಎದುರಿನ ವಾಸ್ತವದ ಬದುಕಿನೊಂದಿಗೆ ಬೆಸೆದುಕೊಳ್ಳುತ್ತವೆ. ಅವನು ಸರಪಳಿಗಳ ಸುಳಿಗೆ ಬೀಳುತ್ತಾನೋ ಅಥವಾ ಇಲ್ಲವೇ ಎಂಬುದೇ ಕಥೆಯ ಹಂದರವಾಗಿದೆ’ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ನಾಯಕ ನಟ ನಿರೂಪ್ ಭಂಡಾರಿ(Nirup Bhandari ), ನಾಯಕಿ ಅಮೃತ್ ಅಯ್ಯಂಗಾರ್ (amruta ayyangar) ಇದ್ದರು.

‘ಓಲ್ಡ್ ಮಾಂಕ್’ ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್ ಶ್ರೀನಿ, ಶಿವಮೊಗ್ಗ ಬಗ್ಗೆ ಹೇಳಿದ್ದೇನು?

Leave a Reply

Your email address will not be published.