ಚಾಕ್ಲೆಟ್ ಕೊಡಿಸುವುದಾಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನಿಗೆ 20 ವರ್ಷ ಜೈಲು

Judgement

 

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಆಟವಾಡುತಿದ್ದ ಬಾಲಕಿಯನ್ನು ಚಾಕ್ಲೆಟ್‌ ಕೊಡುತ್ತೇನೆಂದು ಕರೆದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಕಠಿಣ ಜೈಲು ಕಾರಾಗೃಹ ಶಿಕ್ಷೆ, ಮತ್ತು ₹50,000 ದಂಡ ವಿಧಿಸಲಾಗಿದೆ‌.
ಭದ್ರಾವತಿಯ ಗ್ರಾಮವೊಂದರ ನಿವಾಸಿ ಲಿಂಗರಾಜ್ ಅಲಿಯಾಸ್ ನವೀನ್(18) ಎಂಬುವವನಿಗೆ ಶಿಕ್ಷೆ ವಿಧಿಸಲಾಗಿದೆ.

READ | ‘ವಿಂಡೋಸೀಟ್‘ ರಿಲೀಸಿಂಗ್ ಡೇಟ್ ಫಿಕ್ಸ್, ಕಥಾ ಹಂದರ ಬಿಚ್ಚಿಟ್ಟ ಶಿವಮೊಗ್ಗದವರೇ ಆದ ಶೀತಲ್ ಶೆಟ್ಟಿ

ಪ್ರಕರಣ‌ ದಾಖಲಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಯೋಗೇಶ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪೋಕ್ಸೊ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ ಒಂದುವೇಳೆ ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 6 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ FTSC–II (POCSO) ನ್ಯಾಯಾಧೀಶ ಜೆ.ಎಸ್. ಮೋಹನ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.

https://suddikanaja.com/2021/10/09/ten-year-imprisonment-to-a-man-in-pocso-case/

Leave a Reply

Your email address will not be published. Required fields are marked *

error: Content is protected !!