ಸ್ವಯಂ ಉದ್ಯೋಗ ಯೋಜನೆಗಾಗಿ ಅರ್ಜಿ ಆಹ್ವಾನ

Job Training

 

 

ಸುದ್ದಿ‌ ಕಣಜ.ಕಾಂ‌ | DISTRICT | JOB JUNCTION
ಶಿವಮೊಗ್ಗ: ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು (Babu Jagjivan Ram Leather Industries Corporation Ltd. LIDKAR) 2022-23ನೇ ಸಾಲಿನ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕೈಗಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದೆ.

READ | ಊರುಗಡೂರಿನಲ್ಲಿ ನಾಲ್ವರು ಯುವಕರ ಬಂಧನ

ತರಬೇತಿ, ಸ್ವಯಂ ಉದ್ಯೋಗ ಸ್ವಾವಲಂಬಿ ಮಾರಾಟ ಮಳಿಗೆ, ಸಂಚಾರ ಮಾರಾಟ ಮಳಿಗೆ, ನೇರ ಸಾಲ ಯೋಜನೆ, ಪಾದುಕೆ ಕುಟೀರ ಯೋಜನೆ, ವಸತಿ ಯೋಜನೆ ಹಾಗೂ ಇತರೆ ಯೋಜನೆಗಳಾಗಿ ಅರ್ಜಿ ಆಹ್ವಾನಿಸಿದ್ದು,‌ ಕೂಡಲೇ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು.
ಆಸಕ್ತರು ನಿಗಮದ ವೆಬ್‍ಸೈಟ್ https://lidkar.com  ಅಥವಾ ಸುವಿಧಾ ಜಾಲತಾಣ  http://suvidha.karnataka.gov.in ಮೂಲಕ ನೇರವಾಗಿ ಜುಲೈ 30 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್‍ಕರ್, ನೆಹರೂ ರಸ್ತೆ, ದೂ.ಸಂ.: 9480886268 ಅನ್ನು ಸಂಪರ್ಕಿಸುವುದು.

Leave a Reply

Your email address will not be published. Required fields are marked *

error: Content is protected !!