ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ವಂಚನೆ

Cyber crime

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ವಿದೇಶದಲ್ಲಿ ಉದ್ಯೋಗ (Job) ಕೊಡಿಸುವುದಾಗಿ ನಂಬಿಸಿ 2,20,005 ವಂಚನೆ ಮಾಡಲಾಗಿದೆ.
ಟಿಪ್ಪುನಗರದ ನಿವಾಸಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಇವರು ಮೋಸ  (fraud) ಮಾಡಿರುವುದಾಗಿ ನಾಲ್ವರು ಅಪರಿಚಿತರ ವಿರುದ್ಧ ದೂರು ನೀಡಿದ್ದಾರೆ.

READ | 27 ವರ್ಷಗಳ ಬಳಿಕ ಓಟ ನಿಲ್ಲಿಸಿದ ಇಂಟರ್‍ನೆಟ್ ಎಕ್ಸ್ ಪ್ಲೋರರ್

ನಡೆದಿದ್ದೇನು?
ಶಿವಮೊಗ್ಗ(shivamogga)ದಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ವ್ಯಕ್ತಿಯು ಮನೆಯಲ್ಲಿ ಹಣದ ಸಮಸ್ಯೆ ಇದ್ದು, ಉದ್ಯೋಗದ ಅಗತ್ಯವಿರುತ್ತದೆ. ಆಗ ಅಪರಿಚಿತ ವಾಟ್ಸಾಪ್ ನಂಬರ್ ನಿಂದ ಸಂದೇಶ ಬಂದಿದ್ದು, ಪರಿಶೀಲಿಸಲಾಗಿ ಕುವೈತ್ (kuwait)ನಲ್ಲಿ ಉದ್ಯೋಗ ಇರುವುದಾಗಿ ಸಂದೇಶ ಕಳುಹಿಸಲಾಗಿತ್ತು.
ಕುವೈತ್ ನಲ್ಲಿ ಫೋರ್ ಮನ್ ಕೆಲಸವಿದ್ದು, ತಿಂಗಳಿಗೆ 250 ದಿನಾರ್ ಸಂಬಳವಿದೆ ಎಂದು ತಿಳಿಸಲಾಗಿದೆ. ನಂತರ, ಒಬ್ಬರೇ ಬಂದರೆ ಬಗೆಹರಿಯುವುದಿಲ್ಲ. ನೀವು ಮತ್ತು ಸ್ನೇಹಿತರನ್ನು ಕರೆದುಕೊಂಡು ದೆಹಲಿಗೆ ಬಂದರೆ ಎಲ್ಲರ ಕೆಲಸ ಒಟ್ಟಿಗೆ ಆಗುತ್ತದೆ ಎಂದು ವಾಟ್ಸಾಪ್ ನಲ್ಲಿ ಹೊಸ ದೆಹಲಿಯ ವಿಳಾಸ ಕಳುಹಿಸಲಾಗಿತ್ತು. ನಂಬಿಸುವುದಕ್ಕಾಗಿ ಬಿಸಿನೆಸ್ ಕಾರ್ಡ್ ಗಳನ್ನು ಸಹ ಕಳುಹಿಸಲಾಗಿದೆ. ದಾಖಲೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದು, ಕಂಪನಿಯೊಂದರ ಹೆಸರಿನ ಆಫರ್ ಲೆಟರ್ ಕಳುಹಿಸಲಾಗಿದೆ. ಇದನ್ನು ನಂಬಿ 10,000 ರೂಪಾಯಿಯನ್ನು ಕಳುಹಿಸಿದ್ದಾನೆ. ತದನಂತರ, ಎಂಟ್ರಿ ವಿಸಾದ ಪ್ರತಿಯೊಂದು ಹಾಕಿದ್ದು ಮತ್ತೆ 10,000 ರೂ. ಹಾಕುವಂತೆ ಸೂಚಿಸಲಾಗಿದೆ. ಅದರಂತೆ, ಹಣವನ್ನು ವರ್ಗಾವಣೆ ಮಾಡಿದ್ದಾನೆ. ಹೀಗೆ ಹಂತ ಹಂತವಾಗಿ 2,20,005 ರೂ. ಪಡೆಯಲಾಗಿದೆ. ಹಣ ಕೈಸೇರಿದ್ದೇ ಆರೋಪಿಯು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನಂತರ, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

https://suddikanaja.com/2021/04/18/if-you-are-a-whatsapp-user-then-this-is-a-must-read/

Leave a Reply

Your email address will not be published. Required fields are marked *

error: Content is protected !!