ಸೊರಬದಲ್ಲಿ ಉದ್ಯೋಗ ಅವಕಾಶ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ

Soraba

 

 

ಸುದ್ದಿ ಕಣಜ.ಕಾಂ | TALUK | JOB JUNCTION
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ಉದ್ಯೋಗ ಅವಕಾಶವಿದೆ. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ ಯೋಜನೆಗೆ ಸೊರಬ ತಾಲೂಕು ಪಂಚಾಯಿತಿಯಲ್ಲಿ ಎಂ.ಆರ್.ಡಬ್ಲ್ಯೂ ಹಾಗೂ ಜಡೆ ಮತ್ತು ದ್ಯಾವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು (ವಿ.ಆರ್.ಡಬ್ಲ್ಯೂ) ಗೌರವಧನ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗುತ್ತಿದೆ. 45 ವರ್ಷ ವಯೋಮಿತಿಯೊಳಗಿನ 10ನೇ ತರಗತಿ ಪಾಸಾಗಿರುವ ಸ್ಥಳೀಯ ಅರ್ಹ ವಿಕಲಚೇತನರು ಅರ್ಜಿ ಸಲ್ಲಿಸಬಹುದು.

READ | ಕೆಎಸ್.ಆರ್.ಪಿ ಸೇರಿದ ಎಂಜಿನಿಯರಿಂಗ್, ಸ್ನಾತಕೋತ್ತರ ಪದವೀಧರರು

ಆಸಕ್ತರು ನಿಗದಿತ ನಮೂನೆ ಅರ್ಜಿಗಳನ್ನು ಸೊರಬ ತಾಲೂಕು ಪಂಚಾಯಿತಿಯ ಎಂ.ಆರ್.ಡಬ್ಲ್ಯೂ ಅವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜೂನ್ 22ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಗದಿತ ನಮೂನೆ ಅರ್ಜಿ ಮತ್ತು ಮಾಹಿತಿಗಾಗಿ ಭರತ್ ಕುಮಾರ್ (ಎಂ.ಆರ್.ಡಬ್ಲ್ಯೂ) ಮೊಬೈಲ್ ಸಂಖ್ಯೆ 9110493122 ಅನ್ನು ಸಂಪರ್ಕಿಸುವುದು.

https://suddikanaja.com/2022/02/10/job-placement-in-shikaripura-application-called-for-vrw-post-in-8-grama-panchayats/

Leave a Reply

Your email address will not be published. Required fields are marked *

error: Content is protected !!