Arrest | ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದವನು ಅರೆಸ್ಟ್, ಲಕ್ಷಾಂತರ ಮೌಲ್ಯದ ಬಂಗಾರ ಸೀಜ್

Shiralakoppa

 

 

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIRALAKOPPA: ಶಿರಾಳಕೊಪ್ಪದಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ಎರಡು ಪ್ರಕರಣಗಳಿಗೆ ಸಂಬಂಧಿಸಿದ ಲಕ್ಷಾಂತರ ಮೌಲ್ಯದ ಬಂಗಾರ ವಶಪಡಿಸಿಕೊಳ್ಳಲಾಗಿದೆ‌.

READ |  ದಿ‌ ಐರನ್ ಮ್ಯಾನ್ ಪುಸ್ತಕ ಬಿಡುಗಡೆ, ನಡೆಯಲಿವೆ ಮೂರು ಗೋಷ್ಠಿ 

ಹುಬ್ಬಳ್ಳಿಯ ಜನ್ನತ್ ನಗರದ ಮೂಲದ ವಾಸ್ಕೊ ಗೋವಾ ನಿವಾಸಿ ಖಾಜಾ ಹಾವೇರಿ ಅಲಿಯಾಸ್ ಖಾಜಾ(24) ಎಂಬಾತನನ್ನು ಬಂಧಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಗಳ್ಳತನ ಪ್ರಕರಣ ಮತ್ತು ಹಾನಗಲ್ ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳ್ಳತನ ಸೇರಿ ಒಟ್ಟು 2 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ₹6,81,200 ಮೌಲ್ಯದ 111.85 ಗ್ರಾಂ ಬಂಗಾರ ಆಭರಣ ಮತ್ತು 326 ಗ್ರಾಂ ಬೆಳ್ಳಿಯ ಆಭರಣ ಮತ್ತು ಅಂದಾಜು ₹35,000 ಮೌಲ್ಯದ ಒಂದು ದ್ವಿಚಕ್ರ ವಾಹನ ಸೇರಿ ಒಟ್ಟು ₹7,16,200 ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಯಲ್ಲಿ ಕಳ್ಳತನ
ಶಿರಾಳಕೊಪ್ಪ ಟೌನ್ ಭೋವಿ ಕಾಲೋನಿಯ ನಿವಾಸಿ ಪ್ರಭಾಕರ್ ಶಿಲ್ಪಿ(52) ಅವರ ಮನೆಯಲ್ಲಿ ಡಿ.28 ರಂದು ಮನೆಯ ಹಿಂಬಾಗಿಲಿನಿಂದ ಮನೆಯ ಒಳಗೆ ಬಂದು ಬೀರುವಿನಲ್ಲಿದ್ದ ಅಂದಾಜು ₹6,81,000 ಬಂಗಾರದ ಆಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಆರೋಪಿತರು ಮತ್ತು ಕಳುವಾದ ಸಾಮಗ್ರಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ ಮಾರ್ಗದರ್ಶನದಲ್ಲಿ ಶಿಕಾರಿಪುರ ಪೊಲೀಸ್ ಉಪಾಧೀಕ್ಷಕ ಶಿವಾನಂದ್ ಮದರಖಂಡಿ, ಶಿಕಾರಿಪುರ ವೃತ್ತದ ಸಿಪಿಐ ರುದ್ರೇಶ್ ಮೇಲ್ವಿಚಾರಣೆಯಲ್ಲಿ ಶಿರಾಳಕೊಪ್ಪ ಪಿಎಸ್.ಐ ಮಂಜುನಾಥ ಎಸ್. ಕುರಿ ನೇತೃತ್ವದಲ್ಲಿ ಪಿಎಸ್ಐ ಪುಷ್ಪಾ, ಕೆಂಚಪ್ಪ, ಸಿಬ್ಬಂದಿ ರಮೇಶ್ ನಾಯ್ಕ, ಸಂತೋಷ್, ಮಹದೇವ್, ಸಲ್ಮಾನ್, ಕಾರ್ತಿಕ್, ಅಶೋಕ, ನಾಗರಾಜ್, ಇಂದ್ರೇಶ್, ಗುರುರಾಜ್, ವಿಜಯ್, ತ್ಯಾಗರಾಜ್, ಕಿರಣ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ.

error: Content is protected !!