ಸುದ್ದಿ ಕಣಜ.ಕಾಂ | KARNATAKA | EDUCATION CORNER
ಶಿವಮೊಗ್ಗ: ಭಾರೀ ಚರ್ಚೆ, ವಾದ- ವಿವಾದಗಳಿಗೆ ಕಾರಣವಾಗಿದ್ದ ದೂರ ಶಿಕ್ಷಣ(distance education)ದ ಪರೀಕ್ಷೆ ಮತ್ತು ಫಲಿತಾಂಶದ ವಿಚಾರ ತಾರ್ಕಿಕ ಹಂತಕ್ಕೆ ತಲುಪಿದೆ.
ಈ ಸಂಬಂಧ ಕುವೆಂಪು ವಿಶ್ವವಿದ್ಯಾಲಯ (Kuvempu University)ದ ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್ ಕುಮಾರ್ ಅವರು ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ, ಏಪ್ರಿಲ್ ಮೂರನೇ ವಾರದಲ್ಲಿ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿದೆ.
READ | ಶಿವಮೊಗ್ಗದ ಇಂದಿನ ಟಾಪ್ 14 ಸುದ್ದಿಗಳು, ಕ್ಲಿಕ್ ಮಾಡಿ ಓದಿ
ಕುವೆಂಪು ವಿಶ್ವವಿದ್ಯಾಲಯದ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಆವೃತ್ತಿಗೆ ಪ್ರವೇಶ ಪಡೆದ ದೂರಶಿಕ್ಷಣದ ಸ್ನಾತಕ ಪದವಿಗಳ ಪ್ರಥಮ ಮತ್ತು ದ್ವಿತೀಯ ವರ್ಷ ಹಾಗೂ ಸ್ನಾತಕೋತ್ತರ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸದೇ ಮುಂದಿನ ಸೆಮಿಸ್ಟರ್ ಗಳಿಗೆ ಮುಂಬಡ್ತಿ ನೀಡಲು ನಿರ್ಧರಿಸಿ ಫೆಬ್ರವರಿ 9 ರಂದು ಆದೇಶ ಹೊರಡಿಸಲಾಗಿತ್ತು. ಆದರೆ ಮಾರ್ಚ್ ತಿಂಗಳಿನಲ್ಲಿ ನಡೆದ ಸಿಂಡಿಕೇಟ್ ಸಾಮಾನ್ಯ ಸಭೆ ಮತ್ತು ವಿದ್ಯಾ ವಿಷಯಕ ಪರಿಷತ್ ಸಭೆಗಳ ನಿರ್ಣಯದಂತೆ ಈ ಕ್ರಮವನ್ನು ರದ್ದುಗೊಳಿಸಿ 2022ರ ಏಪ್ರಿಲ್ ಮೂರನೇ ವಾರದಲ್ಲಿ ನಿಯಮಾನುಸಾರ ಗುರುತಿಸಲಾಗುವ ಕಲಿಕಾ ಕೇಂದ್ರಗಳ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಂಬಂಧಿಸಿದ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಈ ಮೂಲಕ ತಿಳಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಸದ್ಯದಲ್ಲೆ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ | ಶಿವಮೊಗ್ಗದಲ್ಲಿ ಉದ್ಯೋಗ, ಆಪ್ತಸಮಾಲೋಚಕರ ಹುದ್ದೆಗೆ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು