ಚಿನ್ನಾಭರಣ ಪ್ರಿಯರಿಗೆ ಶಾಕ್, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

GOLD RATE NEW

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಮತ್ತೆ ಬೆಲೆಯ ಬಿಸಿ ತಟ್ಟಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 22 ಕ್ಯಾರೆಟ್ ಗೆ 47,780 ರೂಪಾಯಿ ಹಾಗೂ 24 ಕ್ಯಾರೆಟ್ ಗೆ 52,120 ರೂಪಾಯಿ ನಿಗದಿಯಾಗಿದೆ.
ಜೂನ್ 14 ಮತ್ತು 15ರಂದು 24 ಕ್ಯಾ.ಗೆ ಕ್ರಮವಾಗಿ 1,050 ರೂ. ಹಾಗೂ 270 ರೂ. ಇಳಿಕೆಯಾಗಿತ್ತು. ಆದರೆ, ಜೂ.16ರಂದು 24 ಕ್ಯಾ.ಗೆ 460 ರೂ. ಮತ್ತು 17ರಂದು 220 ರೂ. ಏರಿಕೆಯಾಗಿದೆ.

READ | ಒಂದೇ ವರ್ಷ 2 ಘಟಿಕೋತ್ಸವಗಳಿಗೆ ಸಾಕ್ಷಿಯಾದ ಕುವೆಂಪು ವಿವಿ, ‘ಚಿನ್ನ’ದ ಹುಡುಗಿಯರ ಮಾತುಗಳಿವು…

ಬೆಳ್ಳಿ ದಿನೇ ದಿನೆ ಅಗ್ಗ
ಒಂದೆಡೆ ಚಿನ್ನದ ಬೆಲೆಯು ಗಗನಮುಖಿಯಾಗಿ ಸಾಗುತ್ತಿದೆ. ಆದರೆ, ಅದೇ ಬೆಳ್ಳಿಯ ಬೆಲೆ ದಿನೇ ದಿನೆ ಇಳಿಕೆಯಾಗುತ್ತಿದೆ. ಜೂನ್ 17ರಂದು ಕರ್ನಾಟಕದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆಯು 66,000 ರೂಪಾಯಿ ಇದೆ. ಕಳೆದ ಜೂ.14ರಿಂದ ದರವು ಇಳಿಕೆಯಾಗುತ್ತಲೇ ಇದೆ.

Leave a Reply

Your email address will not be published. Required fields are marked *

error: Content is protected !!