ಶಿರಾಳಕೊಪ್ಪ ಪೊಲೀಸರ ಭರ್ಜರಿ ಕಾರ್ಯಾಚರಣೆ, ಕಾರಿನಲ್ಲಿತ್ತು ರಾಶಿ ರಾಶಿ ಮದ್ಯ

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿಕಾರಿಪುರ: ಬಳ್ಳಿಗಾವಿ ಸಮೀಪ ವಾಹನ ತಪಾಸಣೆ ವೇಳೆ ಕಾರಿನಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು ಸೋಮವಾರ ಬೆಳಗಿನ ಜಾವ ಸಿಕ್ಕಿವೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಕಾರಿನ ಚಾಲಕ ಸೊರಬ ತಾಲೂಕಿನ ಕಲ್ಲಂಬಿ ಗ್ರಾಮ ಸಚಿನ್(23) ಎಂಬಾತನನ್ನು ಬಂಧಿಸಲಾಗಿದೆ.
ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ತೊಗರ್ಸಿ ಕಡೆಯಿಂದ ಶಿರಾಳಕೊಪ್ಪ ಪಟ್ಟಣದ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

READ | ನಾಲ್ಕೇ ದಿನಗಳಲ್ಲಿ ಗಬ್ಬೆದ್ದ ಸ್ಮಾರ್ಟ್ ಸಿಟಿ, ಮನೆ ತ್ಯಾಜ್ಯ ರಸ್ತೆ ಪಾಲು! 

ಕಾರು ತಡೆದು ನಿಲ್ಲಿಸಿದಾಗ ಶಾಕ್
ಮಾರುತಿ 800 ಕಾರನ್ನು ತಡೆದು ತಪಾಸಣೆ ಮಾಡಿದಾಗ ಕಾರಿನ ಹಿಂಭಾಗದ ಸೀಟಿನ ಕೆಳ ಭಾಗದಲ್ಲಿ ಮದ್ಯದ ಪೌಚ್ ಗಳಿರುವ ಒಟ್ಟು 40 ಬಾಕ್ಸ್ ಇರುವುದು ಕಂಡು ಬಂದಿದೆ. ಚಾಲಕನನ್ನು ವಿಚಾರಿಸಿದಾಗ ಲೈಸೆನ್ಸ್ ಇಲ್ಲದೇ ಮದ್ಯವನ್ನು ಸಂಗ್ರಹಿಸಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ.
ಕಾರಿನಲ್ಲಿ ಸಿಕ್ಕಿದ್ದೇನು?
20 ಬಾಕ್ಸ್ 90 ಎಂಎಲ್ ಹೇವಡ್ರ್ಸ್ ಚೀರ್ಸ್ ವಿಸ್ಕಿ, 12 ಬಾಕ್ಸ್ 90 ಎಂಎಲ್ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ, 5 ಬಾಕ್ಸ್ 330 ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್, 3 ಬಾಕ್ಸ್ 500 ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್ ಸೇರಿದಂತೆ ಅಂದಾಜು 1,27,718 ರೂಪಾಯಿ ಮೌಲ್ಯದ 40 ಮದ್ಯದ ಬಾಕ್ಸ್ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಕುಂಚಿಟಿಗ ಸಮಾಜದ ಮಹ್ವತದ ಸಭೆ, ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯ

Leave a Reply

Your email address will not be published.