ಸಾಗರದಲ್ಲಿ‌ ಅಧಿಕ‌ ಮಳೆ, ತಾಲೂಕುವಾರು ಮಾಹಿತಿ ಇಲ್ಲಿದೆ

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 214.6 ಮಿಮೀ ಮಳೆಯಾಗಿದ್ದು, ಸರಾಸರಿ 30.66 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮೀ ಇದ್ದು, ಇದುವರೆಗೆ ಸರಾಸರಿ 128.66 ಮಿಮೀ ಮಳೆ ದಾಖಲಾಗಿದೆ.
ಸಾಗರ ತಾಲೂಕಿನಲ್ಲಿ ಅತ್ಯಧಿಕ 57.10 ಮಿಮೀ ಮಳೆಯಾಗಿದೆ. ಇನ್ನುಳಿದಂತೆ, ಶಿವಮೊಗ್ಗ 9.80 ಮಿಮೀ, ಭದ್ರಾವತಿ 7.40 ಮಿಮೀ, ತೀರ್ಥಹಳ್ಳಿ 47.80 ಮಿಮೀ, ಸಾಗರ 57.10 ಮಿಮೀ, ಶಿಕಾರಿಪುರ 13.30 ಮಿಮೀ, ಸೊರಬ 38.50 ಮಿಮೀ ಹಾಗೂ ಹೊಸನಗರದಲ್ಲಿ 40.70 ಮಿಮೀ ಮಳೆಯಾಗಿದೆ.

READ | ಶಿವಮೊಗ್ಗದಲ್ಲಿ ಮುಂದುವರಿದ ಮಳೆ,‌ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?

ಜಲಾಶಯಗಳಲ್ಲಿ ನೀರಿನ ಮಟ್ಟ(ಅಡಿಗಳಲ್ಲಿ)

  • ಲಿಂಗನಮಕ್ಕಿ: 1819 (ಗರಿಷ್ಠ), 1762.10 (ಇಂದಿನ ಮಟ್ಟ), 39262.10 (ಒಳಹರಿವು), 903.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.90.
  • ಭದ್ರಾ: 186 (ಗರಿಷ್ಠ), 158.60 (ಇಂದಿನ ಮಟ್ಟ), 30167.00 (ಒಳಹರಿವು), 133.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 153.30.
  • ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 43300.00 (ಒಳಹರಿವು), 43300.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.

ಶಿವಮೊಗ್ಗದಲ್ಲಿ‌ ಮುಂದುವರಿದ ಮಳೆ, ಎಲ್ಲೆಲ್ಲಿ ಏನೇನು ಅನಾಹುತ?

Leave a Reply

Your email address will not be published.