ಭದ್ರಾ ಜಲಾಶಯದ ನಾಲ್ಕೂ ಗೇಟ್ ಓಪನ್, ಹೊರಬಿಡುತ್ತಿರುವ ನೀರಿನ‌ ಪ್ರಮಾಣವೆಷ್ಟು, ಭದ್ರೆಯನ್ನು ವೀಕ್ಷಿಸಲು‌ ಬಂದ ಜನ

Bhadra Dam

 

 

ಸುದ್ದಿ ಕಣಜ.ಕಾಂ | DISTRICT | BHADRA DAM
ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿಯಾಗಿದ್ದು, ಗುರುವಾರ ನಾಲ್ಕು ಕ್ರಸ್ಟ್ ಗೇಟ್ ಗಳನ್ನು ಮೇಲೆತ್ತಿ 12,000 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.
ಭದ್ರಾ ಜಲಾಶಯದ ಪೂರ್ಣ ಮಟ್ಟ 186 ಅಡಿ‌ ಇದ್ದು, 183.2 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು, ನೀರನ್ನು ನದಿಗೆ ಬಿಡಲಾಯಿತು.

READ | ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲೇ ರೌಡಿಶೀಟರ್ ಹತ್ಯೆ

ಪೂಜೆ ಸಲ್ಲಿಸಿ ಗೇಟ್ ಓಪನ್
ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಪೂಜೆ ಸಲ್ಲಿಸಿ ನದಿಗೆ ಬಾಗಿನವನ್ನು ಅರ್ಪಿಸಿದರು. ನಂತರ, ಗೇಟ್ ಗಳನ್ನು ಮೇಲೆತ್ತಿ ನೀರು ಹೊರಗೆ ಬಿಡಲಾಯಿತು. ಪ್ರಸ್ತುತ 43,051 ಕ್ಯೂಸೆಕ್ಸ್ ಒಳಹರಿವು ಇದ್ದು, ನೀರಿನ ಪ್ರಮಾದಲ್ಲಿ ಏರಿಕೆಯಾದರೆ ಮತ್ತಷ್ಟು ನೀರು ಹೊರಗೆ ಬಿಡುವ ಸಾಧ್ಯತೆ ಇದೆ. ಇದೇ‌ ಮೊದಲನೇ ಸಲ ಇಷ್ಟು‌ಬೇಗ ಜಲಾಶಯದಿಂದ ನೀರು ಬಿಟ್ಟಿದ್ದು‌ ವಿಶೇಷ.
ಭದ್ರೆಯನ್ನು ಕಣ್ತುಂಬಿಕೊಂಡ‌ ಜನಸ್ತೋಮ
ಭದ್ರಾ ಜಲಾಶಯದಿಂದ ನೀರನ್ನು ಹೊರಗೆ ಬಿಡುತ್ತಿರುವ ವಿಚಾರ ತಿಳಿಯುತಿದ್ದಂತೆ ಅಕ್ಕಪಕ್ಕದ ಜನರು ಅಲ್ಲಿಗೆ ಬಂದಿದ್ದರು. ನೀರು ಹೊರಬಿಡುತಿದ್ದಂತೆಯೇ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಹಾಲ್ನೊರೆಯನ್ನು ಕಣ್ತುಂಬಿಕೊಂಡರು‌.

https://suddikanaja.com/2021/06/22/person-died-in-tunga-river/

Leave a Reply

Your email address will not be published. Required fields are marked *

error: Content is protected !!