ಶಿವಮೊಗ್ಗದಲ್ಲಿ ನಡೆಯಲಿದೆ ರಾಜ್ಯಮಟ್ಟದ ವೂಶು ಪಂದ್ಯಾವಳಿ, ವಿಜೇತರಿಗೆ ಆಕರ್ಷಕ‌ ಬಹುಮಾನ

Shivamogga taluk

 

 

ಸುದ್ದಿ‌ ಕಣಜ.ಕಾಂ | KARNATAKA | SPORT NEWS
ಶಿವಮೊಗ್ಗ: ನೆಹರೂ ಕ್ರೀಡಾಂಗಣದಲ್ಲಿ ಆಗಸ್ಟ್ 6 ರಿಂ 9ರವರೆಗೆ ರಾಜ್ಯಮಟ್ಟದ 21ನೇ ವೂಶು (Wushu) ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವೂಶು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಶೋಕ್ ಮೊಕಾಶಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 800 ಬಾಲಕರು, ಬಾಲಕಿಯರು, ತರಬೇತುದಾರರು, ನಿರ್ಣಾಯಕರು ಭಾಗವಹಿಸಲಿದ್ದಾರೆ. ಭಾಗವಹಿಸುವ ಎಲ್ಲರಿಗೂ ಶಿವಮೊಗ್ಗ ಸಂಸ್ಥೆಯ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
‘ವೂಶು: ಕ್ರೀಡೆಯು ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ವೂಶು ಆಟಗಾರರನ್ನು ಕೂಡ ಸೇರಿಸಲಾಗಿದೆ ಎಂದರು.

READ | ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಗ್ಯಾಂಗ್ ಸೆರೆ, ಒಂದು ಕೇಸ್ ಬೇಧಿಸಲು 10 ಬೈಕ್ ಸೀಜ್

ಬಹುಮಾನದ ವಿವರ
ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 6 ರಿಂದ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರಾಧಿಕಾರದಿಂದ ₹10 ಸಾವಿರ ನಗದು ಬಹುಮಾನ ನೀಡಲಾಗುವುದು. ವಿಜೇತರಾದ ಎಸ್.ಸಿ. ಹಾಗೂ ಎಸ್.ಟಿ. ಕ್ರೀಡಾಪಟುಗಳಿಗೆ 1 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ಪಂದ್ಯಾವಳಿಯನ್ನು ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಉಸ್ತುವಾರಿ ಸಚಿವ ನಾರಾಯಣಗೌಡ, ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸುವರು.
ಜಿಲ್ಲಾ ವೂಶು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಘನಿ, ಉಪಾಧ್ಯಕ್ಷ ಎಸ್. ಮಂಜುನಾಥ್, ಪದಾಧಿಕಾರಿಗಳಾದ ಅಲ್ಲಾ ಭಕ್ಷಿ, ಮೊಹ್ಮದ್ ಇರ್ಫಾನ್, ಸಂಗಮೇಶ್ ಇದ್ದರು.

https://suddikanaja.com/2021/10/29/shivamoggas-first-rugby-tournment-oraganized-by-association/

 

Leave a Reply

Your email address will not be published. Required fields are marked *

error: Content is protected !!