ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಒಂದು ಬೈಕ್ ಪ್ರಕರಣ ಬೇಧಿಸಲು ಹೋಗಿ ಹತ್ತು ಬೈಕ್ ಗಳನ್ನು ವಶಕ್ಕೆ ಪಡೆದು ಬೈಕ್ ಕಳ್ಳರ ಗ್ಯಾಂಗ್‘ವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದ ಹೊಸಮನೆಯ ರಾಹುಲ್ ಅಲಿಯಾಸ್ ಬ್ರಹ್ಮಾಂಡ(21), ಕಾಮಾಕ್ಷಿ ಬೀದಿಯ ಹರ್ಷ(18) ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
READ | ಅಮಲಿನಲ್ಲಿ ತೂರಾಡುತ್ತಿರುವ ವಿದ್ಯಾರ್ಥಿಗಳ ವಿಡಿಯೋ ವೈರಲ್, ಪೊಲೀಸರೇನು ಹೇಳ್ತಾರೆ?
ಜಯನಗರ ಪೊಲೀಸರ ಕಾರ್ಯಾಚರಣೆ
ನಂಜಪ್ಪ ಆಸ್ಪತ್ರೆ ಹಿಂಭಾಗ ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಂದಾಜು ₹4,80,000 ಮೌಲ್ಯದ ಒಟ್ಟು 10 ಬೈಕ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.