ಅಂತರ ಜಿಲ್ಲಾ ಬೈಕ್ ಕಳ್ಳರ ಗ್ಯಾಂಗ್ ಅರೆಸ್ಟ್, ಲಕ್ಷಾಂತರ ಮೌಲ್ಯದ ಬೈಕ್ ಗಳು ಸೀಜ್

 

ಸುದ್ದಿ ಕಣಜ.ಕಾಂ | KARNATAKA | CRIME NEWS
ಸಾಗರ: ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವೆಡೆ ಬೈಕ್ ಗಳನ್ನು ಕಳ್ಳತನ ಮಾಡಿರುವ ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ.
ಶಿಕಾರಿಪುರ ತಾಲೂಕಿನ ಅಂಜನಾಪುರದ ಸಮೀರ್ ಅಲಿಯಾಸ್ ಸೈಕ್(23), ಶಿವಮೊಗ್ಗದ‌ ಶಾಂತಿನಗರ ನಿವಾಸಿ ಮಹಮದ್ ಖಾದ್ರಿ ಅಲಿಯಾಸ್ ಸುಹೇಲ್(19), ಟ್ಯಾಂಕ್ ಮೊಹಲ್ಲಾದ ಜುನೈದ್ ಖಾನ್ ಅಲಿಯಾಸ್ ಡಾನ್ ಡಾಲಿ(30) ಬಂಧಿತರು.

ಬೈಕ್’ಗಳನ್ನು ವಶಕ್ಕೆ ಪಡೆದ ಪೊಲೀಸರು.

ಪತ್ತೆಯಾದ ಪ್ರಕರಣಗಳು
ಸಾಗರ ಟೌನ್ 1, ಭದ್ರಾವತಿ ಓಲ್ಡ್ ಟೌನ್ 1, ಹರಿಹರ 1, ದಾವಣಗೆರೆಯ ವಿದ್ಯಾನಗರ 1, ಬಡಾವಣೆ ಪೊಲೀಸ್ ಠಾಣೆ ದಾವಣಗೆರೆ 1 ಮತ್ತು ಹಾಸನ ಟೌನ್ 1 ಸೇರಿದಂತೆ ಒಟ್ಟು 6 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ₹8,20,000 ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಒಂದು ಪ್ರಕರಣ ತನಿಖೆ ವೇಳೆ‌ ಪತ್ತೆಯಾಯ್ತು ಗ್ಯಾಂಗ್
ಜೂನ್‌2ರಂದು ಹೊಸನಗರದ ಮಾರುತಿಪುರ ಗ್ರಾಮದ ವಾಸಿಯೊಬ್ಬರು ಕೆಲಸದ ನಿಮಿತ್ತ ತಮ್ಮ ಬಜಾಜ್ ಪಲ್ಸರ್ ಬೈಕ್ ನಲ್ಲಿ ಸಾಗರಕ್ಕೆ ಬಂದಿದ್ದು, ಬೈಕ್ ಅನ್ನು ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ನಗರದಲ್ಲಿ ನಿಲ್ಲಿಸಿದ್ದು, ಕಳ್ಳತನ ಮಾಡಲಾಗಿದೆ.
ಪ್ರಕರಣ‌ ದಾಖಲಿಸಿಕೊಂಡ ಸಾಗರ ಟೌನ್ ಪಿ.ಎಸ್.ಐ, ಪಿಐ ಕಾರ್ಗಲ್ ಪಿ.ಎಸ್.ಐ ಮತ್ತು ತಂಡವು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

4.25 ಲಕ್ಷ ರೂಪಾಯಿ ಮೌಲ್ಯದ ಒಂದು ಟನ್ ಅಡಕೆ ಕದ್ದಿದ್ದ ಕಳ್ಳರು ಅರೆಸ್ಟ್

Leave a Reply

Your email address will not be published.