ಲಂಚಕ್ಕಾಗಿ ಬೇಡಿಕೆ ಇಡಲಾಗುತ್ತಿದೆಯೇ ಕೂಡಲೇ‌ ದೂರು ನೀಡಿ

ACB

 

 

ಸುದ್ದಿ ಕಣಜ.ಕಾಂ‌| DISTRICT | ACB
ಶಿವಮೊಗ್ಗ: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau)ದ ಅಧಿಕಾರಿಗಳು ಜುಲೈ 28 ರಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಆಯನೂರು ಪ್ರವಾಸಿ ಮಂದಿರ ಮತ್ತು ಕುಂಸಿ ಪ್ರವಾಸಿ ಮಂದಿರ ಹಾಗೂ ಜುಲೈ 29 ರಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಗಾಜನೂರು ಪ್ರವಾಸಿ ಮಂದಿರ ಮತ್ತು ಮಲವಗೊಪ್ಪ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ಬಗ್ಗೆ ಅರ್ಜಿ ಸ್ವೀಕಾರ ಮಾಡಲಿದ್ದಾರೆ.

READ | ಶಿವಮೊಗ್ಗದಲ್ಲಿ ಪೊಲೀಸರ ಹೈಅಲರ್ಟ್, ತಲ್ವಾರ್ ಸೇರಿ‌ ಮಾರಕಾಸ್ತ್ರಗಳು ಸೀಜ್

ಸಾರ್ವಜನಿಕರು ಆಯಾ ಗ್ರಾಮ ಹಾಗೂ ಸ್ಥಳಗಳಲ್ಲಿ ನಡೆಯುವ ಸಭೆಗೆ ಆಗಮಿಸಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಲಂಚಕ್ಕಾಗಿ ಒತ್ತಾಯ, ವಿಳಂಬ ಮತ್ತು ನಿರ್ಲಕ್ಷ್ಯ ತೋರಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!