
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗುಂಡಪ್ಪ ಶೆಡ್ ನ ಮಲ್ಲೇಶ್ವರ ನಗರದ ಪಾರ್ಕ್ ನಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ,ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
READ | ಶಿವಮೊಗ್ಗದಲ್ಲಿ ನಡೆಯಲಿದೆ ಡಾಗ್ ಶೋ, ಯಾವ ಶ್ವಾನಗಳನ್ನು ತರುವಂತಿಲ್ಲ, ಇಲ್ಲಿವೆ 6 ಕಂಡಿಷನ್ಸ್
ರಾಜೀವ್ ಗಾಂಧಿ ಬಡಾವಣೆಯ ಮೊಹಮ್ಮದ್ ಹಸೇನ್ ಅಲಿಯಾಸ್ ಅಶು(23) ಎಂಬತನನ್ನು ವಶಕ್ಕೆ ಪಡೆದು ಆತನ ಬಳಿಯಿಂದ ಅಂದಾಜು ₹5,000/ ಮೌಲ್ಯದ ಒಟ್ಟು 204 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ NDPS ಕಾಯ್ದೆ ರೀತ್ಯಾ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.