2 ಹಂತದಲ್ಲಿ ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

shivamogga ranebennur railway 1

 

 

ಸುದ್ದಿ ಕಣಜ.ಕಾಂ | DISTRICT | RAILWAY ROUTE
ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿದ ಅವರು, ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ನೂತನ ರೈಲು ಮಾರ್ಗ ಯೋಜನೆ(103 ಕಿ.ಮೀ)ಯನ್ನು 2 ಹಂತಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಮೊದಲನೆ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಗೆ ಸಂಬಂಧಿಸಿದೆ. ಎರಡನೇ ಹಂತವು ಶಿಕಾರಿಪುರ-ರಾಣೆಬೆನ್ನೂರು ನಡುವಿನ ಕಾಮಗಾರಿಗೆ ಸಂಬಂಧಿಸಿದೆ ಎಂದು ತಿಳಿಸಿದರು.
ಶಿವಮೊಗ್ಗ- ಶಿಕಾರಿಪುರ ನಡುವಿನ 54 ಕಿ.ಮೀ.ಗಳ ರೈಲು ಮಾರ್ಗದ ನಿರ್ಮಾಣಕ್ಕಾಗಿ ಒಟ್ಟಾರೆ 388 ಎಕರೆ ಖಾಸಗಿ ಜಮೀನು ಹಾಗೂ 118 ಎಕರೆ ಅರಣ್ಯ ಭೂಮಿ ಹಾಗೂ 45 ಎಕರೆ ಸರ್ಕಾರಿ ಜಮೀನು ಇದೆ ಎಂದರು.

READ | ಶಿವಮೊಗ್ಗ, ಭದ್ರಾವತಿ ರೈಲ್ವೆ ಓವರ್ ಬ್ರಿಡ್ಜ್ ಪರಿಶೀಲಿಸಿದ ಸಂಸದ ರಾಘವೇಂದ್ರ, ಕಾಮಗಾರಿಗಳ ಪೂರ್ಣ ಮಾಹಿತಿ ಇಲ್ಲಿದೆ 

ಕೆಐಎಡಿಬಿ ಸಂಸ್ಥೆ ಈಗಾಗಲೇ ಎಲ್ಲ ಖಾಸಗಿ ಜಮೀನಿನ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ಸುಮಾರು 220-225 ಎಕರೆ ಭೂಮಿಯ ಮಾಲೀಕರಿಗೆ ಭೂಪರಿಹಾರವನ್ನು ವಿತರಣೆ ಮಾಡಲಾಗಿದೆ. ಉಳಿದವರಿಗೆ ಅವಾರ್ಡ್ ನೋಟೀಸ್ ಜಾರಿಯಾಗಿದೆ. ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಲಾಗಿದೆ. ರೈಲ್ವೆ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೋಟೆಗಂಗೂರು ಕೋಚಿಂಗ್ ಡಿಪೋ
ಕೋಟೆಗಂಗೂರಿನಲ್ಲಿ ಒಟ್ಟು 111.75 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಚಿಂಗ್ ಯಾರ್ಡ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್ ಸಹ ನಿರ್ಮಾಣ ಮಾಡಲಾಗುತ್ತದೆ.

https://suddikanaja.com/2021/02/15/shivamogga-ranebennur-railway-work-will-finish-in-2022-central-railway-minister-piyush-goyal-announced/

Leave a Reply

Your email address will not be published. Required fields are marked *

error: Content is protected !!