MALNAD NETWORK | ನೆಟ್ವರ್ಕ್ ಸಮಸ್ಯೆಯ ಮಲೆನಾಡಿನ 96 ಹಳ್ಳಿಗಳ ಹೆಸರು ಕೇಂದ್ರಕ್ಕೆ ಹಸ್ತಾಂತರ, ಪಟ್ಟಿಯಲ್ಲಿ ಯಾವ ಊರುಗಳಿವೆ?

 

ಸುದ್ದಿ ಕಣಜ.ಕಾಂ | KARNATAKA | MOBILE NETWORK 
ಶಿವಮೊಗ್ಗ: ಮಲೆನಾಡಿನಲ್ಲಿ (Malnad) ನೆಟ್ವರ್ಕ್ ಸಮಸ್ಯೆ (Network problem) ಇಂದು ನಿನ್ನೆಯದ್ದಲ್ಲ. ಈ ಹಿಂದೆ ಇದಕ್ಕಾಗಿ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧಗಳೇ ವ್ಯಕ್ತವಾಗಿದ್ದವು. ಕೋವಿಡ್ ಕಾಲದಲ್ಲಿ ವರ್ಕ್ ಫ್ರಂ ಹೋಂ  (Work from home) ಮಾಡುವಾಗ ನೆಟ್ವರ್ಕ್ ಇಲ್ಲದೇ ದೂರದ ಗುಡ್ಡಕ್ಕೆ ಹೋಗಿ ಕೆಲಸ ಮಾಡುತ್ತಿದ್ದ ಉದಾಹರಣೆಗಳೂ ಇವೆ.
ಈ ಎಲ್ಲ ಅಂಶಗಳನ್ನು ಮನಗಂಡು ಸಂಸದ ಬಿ.ವೈ.ರಾಘವೇಂದ್ರ (BY Raghavendr) ಅವರು ಕೇಂದ್ರದ ದೂರಸಂಪರ್ಕ ಮತ್ತು ರೈಲ್ವೆ ಮಂತ್ರಾಲಯದ ಸಚಿವ ಅಶ್ವಿನಿ ವೈಷ್ಣವಿ ಅವರನ್ನು ದೆಹಲಿಯಲ್ಲಿ ಭೇಟಿ ನೀಡಿ ಮನವಿ ಪತ್ರವನ್ನು ನೀಡಿದರು. ಅದರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ ಜಿಲ್ಲೆ ಮತ್ತು ಬೈಂದೂರು ವ್ಯಾಪ್ತಿಯ ಹಳ್ಳಿಗಳ ಹೆಸರುಗಳನ್ನು ನೀಡಲಾಗಿದೆ.

READ | ಧಾರಾಕಾರ ಮಳೆಗೆ ಶಿವಮೊಗ್ಗದ ಹಲವೆಡೆ ರಸ್ತೆಗಳು ಜಲಾವೃತ, ಬೈಪಾಸ್ ಬಳಿ ಜಲಪ್ರವಾಹ 

96 ಹಳ್ಳಿಗಳ ಹೆಸರು ಕೇಂದ್ರ ಸಚಿವರಿಗೆ ಸಲ್ಲಿಕೆ
ಶಿವಮೊಗ್ಗ ಜಿಲ್ಲೆಯ 80, ಬೈಂದೂರಿನ 16 ಹಳ್ಳಿಗಳ ಹೆಸರುಗಳನ್ನು ಕೇಂದ್ರ ಸಚಿವರಿಗೆ ಹಸ್ತಾಂತರಿಸಲಾಗಿದೆ. ನೆಟ್ವರ್ಕ್ ಇಲ್ಲದೇ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರದ ಗಗಮನ ಸೆಳೆಯುವ ಕೆಲಸವನ್ನು ರಾಘವೇಂದ್ರ ಮಾಡಿದ್ದಾರೆ.
ಕಾನನದ ನಡುವೆ ಇರುವ ಹಳ್ಳಿಗಳಾಗಿರುವುದರಿಂದ ಅಂತಹ ಪ್ರದೇಶಗಳಲ್ಲಿ ನೆಟ್ವರ್ಕ್ ಲಭ್ಯವಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳ ಪ್ರಗತಿಯ ಮೇಲೆ ಪೆಟ್ಟು ಬೀಳುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.
» ಹೊಸನಗರ
ಅಂದಗೊಳಿ, ಬಸವಾಪುರ, ಬೆಗದಳ್ಳಿ, ಬೇಳೂರು, ಬ್ರಾಹ್ಮಣತರುವೆ, ಬೈದೂರು, ದೊಬ್ಯಾಳು, ಗಿಣಿಕಲ್, ಗುಬ್ಬಿಗ, ಗುಡೋಡಿ, ಹಳೆತೋಟ, ಹೊಳೆಗೋಡು, ಹೊರೊಯತಿಗೆ, ಕಳಸೆ, ಕಾನಗೋಡು, ಕರಿಗಲ್ಲು, ಕಟ್ಟೆಕೊಪ್ಪ, ಕಟ್ಟಿನಹೊಳೆ, ಕೆ.ಹೊನ್ನೆಕೊಪ್ಪ, ಕಿಲಂದೂರು ಜಂಗಲ್, ಕೊಳವಾಡಿ, ಕೊಳವಾಡಿ, ಕೊರನಕೋಟೆ, ಮಾಗೋಡಿ, ಮಳಲಿ, ಮನಸೆಟ್ಟೆ, ಮಸ್ಕಾನಿ, ನೀಲಕಂಠನ ತೋಟ, ನೆಲಗಳಲೆ, ಪಿ.ಕಲ್ಲುಕೊಪ್ಪ, ರಾವೆ, ತೋಟದಕೊಪ್ಪ, ಉಳ್ತಿಗ.
» ಸಾಗರ
ಬಾಳಿಗೆ, ಬರುವೆ, ಬೊಬ್ಬಿಗೆ, ಬ್ರಾಹ್ಮಣ ಇಳಕಳಲೆ, ಚದರವಳ್ಳಿ, ಚಿಮ್ಲೆ, ಹೆದಾತ್ರಿ, ಹೊನಗಲ್ಲು, ಕಗರಸು, ಕಲ್ಲೂರು, ಕನಪಗಾರು, ಕಣ್ಣೂರು, ಕಾರಣಿ, ಕಟ್ಟಿನಕಾರು, ಕಿರುವಾಸೆ, ಕೊಪ್ಪರಿಗೆ, ಮಾಳೂರು, ಮರಾಟಿ, ಮುಳ್ಳಕೆರೆ, ಮುಪ್ಪಾನೆ, ನಡಕೆಪ್ಪಿಗೆ, ನೆಲಹರಿ, ಶಿರಗಳಲೆ ಅವಡೆ, ತಳಗೋಡು, ಉರುಳಗಲ್ಲು, ವಾಲೂರು.
» ಶಿವಮೊಗ್ಗ
ಚಿತ್ರಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ, ಕೋಣೆ ಹೊಸೂರು, ಕುಡಗಲ ಮನೆ, ಮಲೆಶಂಕರ, ಸಿದ್ದಾಮ್ಮಾಜಿ ಹೊಸೂರು.
» ತೀರ್ಥಹಳ್ಳಿ
ಆಲಸೆ, ಬಸವನಗದ್ದೆ, ಬೊಮ್ಮನಹಳ್ಳಿ, ಚಕ್ಕೋಡಬೈಲು, ಗರಗ, ಹೆಗಲತ್ತಿ, ಹಿರೇಬೈಲು, ಹುರುಳಿ, ಕಿಕ್ಕೇರಿ, ಕೊಂಬಿನಕೈ, ನೇರಲಮನೆ, ಶುಂಠಿಹಕ್ಲು, ಟೆಂಕಬೈಲು, ತೋಟದಕೊಪ್ಪ, ಯೋಗಿಮಳಲಿ.
» ಬೈಂದೂರು
ಹಳ್ಳಿಹೊಳೆ(ಕಾಲ್ಸಂಕ), ಹಳ್ಳಿಹೊಳೆ(ಕುಂಡ್ಲಬೈಲ್-ಐರಿಗೆ), ಜಡ್ಲಲ್(ಬಸ್ರಿಬೇರು), ಕೊಲ್ಲೂರು, ಕಲ್ತಾಡು, ಗೋಳಿಹೊಳೆ(ಚುಚ್ಚಿ), ಬೈಂದೂರು(ನಾಗರಮಕ್ಕಿ), ಬೈಂದೂರು (ಬೋಳಂಬಲ್ಲಿ), ಬೈಂದೂರು(ಮಂಡಗದ್ದೆ), ಮಚ್ಚತ್ತು (ಹಂಚಿಕಟ್ಟೆ), ಹೊಸೂರು(ಮರಡಕಲ್ಲು), ಹೊಸೂರು(ಕುಕ್ಕಡ), ಬೆಲ್ಲಾಲ(ನಂದ್ರೋಲಿ), ಬೆಲ್ಲಾಲ(ಊರಬೈಲ್), ಸೊದ್ದಾಪುರ(ಏರ್ ಬೈಲ್-ಕೊಲ್ಕೊಬೈಲ್), ಹೊಸಂಗಡಿ(ಬೆಚ್ಚಳ್ಳಿ).

ದಿಢೀರ್ ಕೈಕೊಟ್ಟ BSNL, ಮಲೆನಾಡಲ್ಲಿ ಮತ್ತೆ ನೆಟ್ವರ್ಕ್ ಪ್ರಾಬ್ಲಂ

Leave a Reply

Your email address will not be published.