ಧಾರಾಕಾರ ಮಳೆಗೆ ಶಿವಮೊಗ್ಗದ ಹಲವೆಡೆ ರಸ್ತೆಗಳು ಜಲಾವೃತ, ಬೈಪಾಸ್ ಬಳಿ ಜಲಪ್ರವಾಹ

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಗುರುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಆದರೆ, ಸಂಜೆಯ ನಂತರ ಸುರಿದ ಧಾರಾಕಾರ ಮಳೆಗೆ ಶಿವಮೊಗ್ಗ ನಗರ, ಭದ್ರಾವತಿಯಲ್ಲಿ ನೆರೆ ಸೃಷ್ಟಿಯಾಗಿದೆ.
ಊರಗಡೂರು, ಸೂಳೆಬೈಲು, ಆರ್.ಎಂ.ಎಲ್.ನಗರ, ಸಫಾ ಲೇಔಟ್ ಸೇರಿದಂತೆ ಹಲವೆಡೆ ನೆರೆ ಸೃಷ್ಟಿಯಾಗಿದೆ. ಮನೆ, ಕಾಂಪ್ಲೆಕ್ಸ್’ಗಳಿಗೆ ನೀರು ನುಗ್ಗಿದ್ದು, ಸಾರ್ವಜನನಿಕರು ಸಂಚಾರಕ್ಕೆ ಕಷ್ಟಪಟ್ಟರು.
ಭದ್ರಾವತಿ ಬೈಪಾಸ್ ರಸ್ತೆಯ ಮೇಲೆ ನೀರು ಹರಿದುಬರುತ್ತಿರುವುದರಿಂದ ಹಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

https://www.highperformancegate.com/cdeyj4mni3?key=f95ce548ba397001c5150fe03b415e4a

Leave a Reply

Your email address will not be published.