Rain Damage | ಶಿವಮೊಗ್ಗದಲ್ಲಿ ಸೂರು ಕಳೆದುಕೊಂಡವರಿಗೆ ಕಾಳಜಿ ಕೇಂದ್ರಗಳ ಆಸರೆ, ಎಲ್ಲೆಲ್ಲಿ ಬಿದ್ದಿವೆ ಮನೆ?

Kalaji Kendra

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಹಲವೆಡೆ ಮನೆಗಳ ಗೋಡೆಗಳು ಕುಸಿದಿವೆ.
ಸೂರು ಕಳೆದುಕೊಂಡವರಿಗಾಗಿ ಕವಲಗುಂದಿ ಮತ್ತು ಹೊಳೆಹೊನ್ನೂರಿನಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಸಂತ್ರಸ್ತರ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಮಳೆ ಮುಂದುವರಿದಿದ್ದು, ಜಿಲ್ಲೆಯ ಹಲವೆಡೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ.

READ | ಬೆಳ್ಳಂಬೆಳಗ್ಗೆ ಪ್ರಾವಿಜನ್ ಸ್ಟೋರ್‍ಗೆ ಬೆಂಕಿ, ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮ

ಶಿವಮೊಗ್ಗ, ಭದ್ರಾವತಿಯಲ್ಲಿ ಹಂಚಿನ ಮನೆಗಳಿಗೆ ಹಾನಿ
ಭದ್ರಾವತಿ ತಾಲೂಕಿನ ಸುರಗಿತೊಪ್ಪಿನ ನಾಲ್ಕನೇ ತಿರುವಿನಲ್ಲಿ ಮಹಾದೇವಯ್ಯ ಮತ್ತು ಕೋದಂಡರಾಮ ಎಂಬುವವರ ಮನೆ ಗಳು ಕುಸಿದಿವೆ. ಮೂರನೇ ತಿರುವಿನಲ್ಲಿ ರಮೇಶ್ ಅವರ ಮನೆಗೂ ಹಾನಿಯಾಗಿದೆ.
ಶಿವಮೊಗ್ಗದ ಶೇಷಾದ್ರಿಪುರಂನಲ್ಲಿರುವ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರಂಗಮ್ಮ ಅವರ ಮನೆಯೂ ಬಿದ್ದಿದೆ. ಈ ಸ್ಥಳಕ್ಕೆ ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಭೇಟಿ ನೀಡಿದ್ದಾರೆ.
ಟ್ಯಾಂಕ್ ಮೊಹಲ್ಲಾದ ರಜಿಯಾಬೇಗಂ, ಬಾಪೂಜಿನಗರದ ಪುಟ್ಟಮ್ಮ ಅವರ ಮನೆಯ ಗೋಡೆಗಳು ಕುಸಿದಿವೆ.

ನೀವೂ ರಿಪೋರ್ಟರ್ ಆಗಿ. ನಿಮ್ಮ ಭಾಗದಲ್ಲಿನ ಘಟನೆ, ಕಾರ್ಯಕ್ರಮ, ಸಮಸ್ಯೆಗಳ ಬಗ್ಗೆ ನಮಗೆ ಬರೆದು ಕಳುಹಿಸಿ. ನಮ್ಮ ವಾಟ್ಸಾಪ್ ಸಂಖ್ಯೆ 9483130291ಗೆ ಸುದ್ದಿಯನ್ನು ಕಳುಹಿಸಿ

Leave a Reply

Your email address will not be published. Required fields are marked *

error: Content is protected !!