Arecanut | ಅಡಿಕೆ ಉತ್ಪನ್ನ ಆಮದು ಮೇಲಿನ ಸುಂಕ ಹೆಚ್ಚಿಸಲು ರಾಜ್ಯ ನಿಯೋಗ ಕೇಂದ್ರಕ್ಕೆ ಆಗ್ರಹ, ಬೇಡಿಕೆಗಳೇನು?

arecanut

 

 

  • ಗೃಹ ಸಚಿವ‌ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕೇಂದ್ರ ಸಚಿವರಿಗೆ ಭೇಟಿ
  • ನಿಯೋಗದ ಬೇಡಿಕೆಗಳನ್ನು ಸ್ವೀಕರಿಸಿ ಸಕಾರಾತ್ಮಕ ಸ್ಪಂದನೆ

ಸುದ್ದಿ ಕಣಜ.ಕಾಂ | KARNATAKA | 21 AUG 2022
ಬೆಂಗಳೂರು: ರಾಜ್ಯ ಅಡಿಕೆ ಬೆಳೆಗಾರರ ಸಂಘದ ನಿಯೋಗವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರದ ಅರ್ಥ, ಕೃಷಿ, ಮತ್ತು ವಾಣಿಜ್ಯ ಖಾತೆಯ ಸಚಿವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರ ಹಿತ ರಕ್ಷಣೆಗೆ ಅಮಾದು ಆಗುವ ಅಡಿಕೆ ಉತ್ಪನ್ನದ ಮೇಲೆ ನಿಯಂತ್ರಣ ಹೇರಬೇಕೆಂದು ಒತ್ತಾಯಿಸಿತು.

READ | ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತ, ಎಲ್ಲಿ ಮಾಡಿಸಬೇಕು?

ಅಡಿಕೆ ಬೆಳೆಯ ನಿಗದಿತ ಉತ್ಪಾದನಾ ವೆಚ್ಚ ಹೆಚ್ಚು ಮಾಡಬೇಕು, ಆಮದು ಮೇಲಿನ ಸುಂಕ ಜಾಸ್ತಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ನವದೆಹಲಿಗೆ ಬಂದಿದ್ದೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅಡಿಕೆ ಮೇಲಿನ ಜಿಎಸ್.ಟಿ ದರದ ಬಗ್ಗೆಯೂ ಕೇಂದ್ರ ಸಚಿವರ ಬಳಿ ಚರ್ಚಿಸಿ, ಮನವಿ ಸಲ್ಲಿಸಲಾಗುವುದು ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಸಕ ಹರತಾಳು ಹಾಲಪ್ಪ, ಇನ್ನಿತರ ಗಣ್ಯರೂ ನಿಯೋಗದಲ್ಲಿದ್ದರು.

https://suddikanaja.com/2021/02/10/order-for-investigation-of-nirantara-jyoti-scheme-implementation-in-shivamogga/

Leave a Reply

Your email address will not be published. Required fields are marked *

error: Content is protected !!