Leopard | ಆಲದಹಳ್ಳಿ-ಸೋಮಿನಕೊಪ್ಪ ಭಾಗದಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ

Leopard

 

 

  • ಶಿವಮೊಗ್ಗ ತಾಲೂಕು ಕೊಮ್ಮನಾಳ ಗ್ರಾಪಂ ವ್ಯಾಪ್ತಿಯ ಆಲದಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ
  • ಎರಡು ಚಿರತೆಗಳಲ್ಲಿ ಒಂದು ಸೆರೆ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮಕ್ಕೆ ರವಾನೆ

ಸುದ್ದಿ ಕಣಜ.ಕಾಂ | DISTRICT | 31 AUG 2022
ಶಿವಮೊಗ್ಗ: ತಾಲೂಕಿನ ಕೊಮ್ಮನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಹಳ್ಳಿಯಲ್ಲಿ 4 ವರ್ಷದ ಚಿರತೆ ಬೋನಿಗೆ ಬಿದ್ದಿದೆ.
ಇದು ಕಳೆದ ಕೆಲವು ದಿ‌ನಗಳಿಂದ ಆಲದಹಳ್ಳಿ- ಸೋಮಿನಕೊಪ್ಪ ಸುತ್ತಮುತ್ತಲಿನ ಭಾಗದ ಜನರಲ್ಲಿ ಭೀತಿಗೆ ಕಾರಣವಾಗಿತ್ತು.
ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಕಳೆದ ವಾರ ಬೋನು ಇಡಲಾಗಿದ್ದು, ಚಿರತೆ ಸೆರೆಯಾಗಿದೆ.

READ | ತಾಳಗುಪ್ಪ-ಹುಬ್ಬಳ್ಳಿ ಸರ್ವೇ ವರದಿ‌ ನವೆಂಬರ್ ನಲ್ಲಿ ಸಲ್ಲಿಕೆ 

ಸೆರೆ ಹಿಡಿದಿರುವ ಚಿರತೆಯನ್ನು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದಲ್ಲಿ ತಪಾಸಣೆ ಉದ್ದೇಶದಿಂದ ಬಿಡಲಾಗಿದೆ. ಇದರ ಚಲನವಲನವನ್ನು ಈ ವೇಳೆ ಪರಿಶೀಲಿಸಲಾಗುವುದು. ಆಲದಹಳ್ಳಿ ಭಾಗದಲ್ಲಿ ಎರಡು ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಗಮನಕ್ಕೆ‌ ಬಂದಿದ್ದು, ಎರಡರಲ್ಲಿ ಒಂದು ಮಾತ್ರ ಜನರ ಮೇಲೆ ದಾಳಿ ಮಾಡುವುದು, ದನಕರುಗಳನ್ನು ಹೊತ್ತೊಯ್ಯುತಿದ್ದ‌ ಬಗ್ಗೆ ಜನರು ದೂರಿದ್ದಾರೆ. ಆದರೆ, ಈಗ ಬೋನಿಗೆ ಬಿದ್ದಿರುವುದು ಯಾವ ಚಿರತೆ ಎಂಬ ಸ್ಪಷ್ಟತೆ ಇಲ್ಲ. ಅದನ್ನು ಸಹ ವೈದ್ಯರು ಪರಿಶೀಲಿಸಲಿದ್ದಾರೆ. ನಂತರ, ಅದನ್ನು ಕಾಡಿಗೆ ವಾಪಸ್ ಬಿಡುವುದೋ‌ ಅಥವಾ ಸಿಂಹಧಾಮದಲ್ಲಿಯೇ ಇಡಬೇಕೆನ್ನುವುದು ನಿರ್ಧರಿಸಲಾಗುವುದು.

https://suddikanaja.com/2022/08/24/two-elephant-from-sakrebailu-use-for-operation-leopard-at-belagavi/

Leave a Reply

Your email address will not be published. Required fields are marked *

error: Content is protected !!