Election Result | ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಚುನಾವಣೆ ಫಲಿತಾಂಶ ಪ್ರಕಟ, ಎಷ್ಟು ಮತಗಳಿಂದ ಯಾರೆಲ್ಲ‌ ಗೆದಿದ್ದಾರೆ?

Breaking news

 

 

  • 10 ವರ್ಷಗಳ‌ ಬಳಿಕ ನಡೆದ ಚುನಾವಣೆ, ಭಾನುವಾರ ತಡರಾತ್ರಿವರೆಗೂ ನಡೆದ ಮತ ಎಣಿಕೆ
  • ಕಣದಲ್ಲಿದ್ದ ಘಟಾನುಘಟಿಗಳು ನಡುವೆ ಮತ ಬೇಟೆಗೆ ಭರ್ಜರಿ ಫೈಟ್

ಸುದ್ದಿ ಕಣಜ.ಕಾಂ | DISTRICT | 22 AUG 2022
ಶಿವಮೊಗ್ಗ: ಭಾರೀ ಕುತೂಹಲ ಹಾಗೂ ಹೈ ವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ(Basaveshwara veerashaiva samaja seva sangha)ದ ನಿರ್ದೇಶಕರ (Director) ಚುನಾವಣೆಯ ಫಲಿತಾಂಶ (Result) ಪ್ರಕಟವಾಗಿದೆ.
10 ವರ್ಷಗಳ ಬಳಿಕ ನಡೆದ ಚುನಾವಣೆ(Election)ಯಲ್ಲಿ ಘಟಾನುಘಟಿಗಳು ಕಣದಲ್ಲಿದ್ದರಿಂದ ಮತಬೇಟೆಗೆ ಭರ್ಜರಿ ಫೈಟ್ ಕೂಡ ಏರ್ಪಟ್ಟಿತ್ತು. 15 ನಿರ್ದೇಶಕರ ಸ್ಥಾನಕ್ಕೆ‌ ನಡೆದ ಚುನಾವಣಾ ಕಣದಲ್ಲಿ 50 ಅಭ್ಯರ್ಥಿಗಳಿದ್ದರು.
3,830 ಮತಗಳ ಚಲಾವಣೆ
ನಗರದ ಬಸವೇಶ್ವರ ಶಿಕ್ಷಣ ಸಂಸ್ಥೆ (Basaveshwara education society) ಆವರಣದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಯವರೆಗೆ ನಡೆಯಿತು. 6,200 ಮತದಾರರಲ್ಲಿ 3,830 ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚುನಾವಣೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿ ಎಸ್‌.ಪಿ.ದಿನೇಶ್‌ ನೇತೃತ್ವದ ಬಸವಸೇನೆ, ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷೆ ಉಮಾ ಮಹೇಶ್‌ ನೇತೃತ್ವದ ಕೆಳದಿ ಶಿವಪ್ಪ ನಾಯಕ ಪಡೆ ಹಾಗೂ ಹಾಲಿ ಅಧ್ಯಕ್ಷ ಎನ್‌.ಜೆ.ರಾಜಶೇಖರ್‌ (ಸುಭಾಷ್‌) ಹಾಗೂ ಕಾರ್ಯದರ್ಶಿ ಜ್ಯೋತಿಪ್ರಕಾಶ್‌ ಒಳಗೊಂಡ ತಂಡಗಳು ಸ್ಪರ್ಧಿಸಿದ್ದವು‌. ಇನ್ನೂ ಐದು ಜನ ವೈಯಕ್ತಿಕವಾಗಿ ಕಣದಲ್ಲಿದ್ದರು.

READ | ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತ, ಎಲ್ಲಿ ಮಾಡಿಸಬೇಕು?

ಚುನಾವಣಾ ಫಲಿತಾಂಶ

  1. ಎಸ್.ಎಸ್.ಜ್ಯೋತಿಪ್ರಕಾಶ್ 2201
  2. ಎನ್.ಜೆ.ರಾಜಶೇಖರ್ 1984
  3. ಎಸ್.ಪಿ.ದಿನೇಶ್ 1832
  4. ಅನಿತಾ ರವಿಶಂಕರ್ 1557
  5. ಸಂತೋಷ್ ಬಳ್ಳಕೆರೆ 1411
  6. ಸಿ.ರೇಣುಕಾರಾಧ್ಯ 1395
  7. ಮಹಾಲಿಂಗಶಾಸ್ತ್ರೀ 1241
  8. ಎಚ್.ಶಾಂತ ಆನಂದ್ 1193
  9. ಕೆ.ಎಸ್.ತಾರಾನಾಥ್ 1176
  10. ಮೋಹನ್ ಕುಮಾರ್ ಎಸ್.ಬಾಳೆಕಾಯಿ 1173
  11. ಟಿ.ಬಿ.ಜಗದೀಶ್ 1145
  12. ಪಿ.ರುದ್ರೇಶ್ 1119
  13. ಎಂ.ಆರ್.ಪ್ರಕಾಶ್ 1077
  14. ಸಿ.ಮಹೇಶ್ ಮೂರ್ತಿ 1046
  15. ಜೆ.ಆರ್.ರತ್ನ 1034

https://suddikanaja.com/2021/09/18/jd-post-re-allocate/

Leave a Reply

Your email address will not be published. Required fields are marked *

error: Content is protected !!