
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತುಂಗಾನದಿ (Tunga river) ಯಲ್ಲಿ ಈಜಲು ಹೋದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಅಗ್ರಹಾರ ನಿವಾಸಿ ನಟರಾಜ್ ಅವರ ಪುತ್ರ ಅಶ್ವತ್ಥ್ (16) ಮೃತರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದ ಈತ ಸ್ನೇಹಿತರೊಂದಿಗೆ ಈಜಲು ತೆರಳಿದಾಗ ಘಟನೆ ನಡೆದಿದೆ.
READ | ಖಾಸಗಿ ವಿಡಿಯೋ ಚಿತ್ರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್
ಶಾರ್ಟ್ ಫಿಲ್ಮ್ ಗಳಲ್ಲೂ ನಟನೆ
ಕಿರುಚಿತ್ರಗಳಲ್ಲಿ ನಟಿಸಿ ಉತ್ತಮ ನಟ ಎನಿಸಿಕೊಂಡಿದ್ದ ಅಶ್ವತ್ಥ್ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ. ನೃತ್ಯಪಟು ಸಹ ಆಗಿದ್ದ ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.